ಮೋಡವು ಮಳೆಯನು ಚೆಲ್ಲಿರಲು,
ಭೂಮಿಯು ಅದರಲಿ ಮಿಂದಿರಲು,
ನಲ್ಲನು ನಲ್ಲೆಗೆ ಕಾದಿರಲು,
ಬರುವಳಾ ಸುಂದರಿ ಜೊತೆಗಿರಲು?
ಕೇಳಲು ಕೌತುಕ ನಿಮಗಿರಲು..
ನನ್ನೀ ಕವಿತೆ ಬಣ್ಣಿಸಲು..
ಮಿಲನ ಮಹೋತ್ಸವ ಸಂಭ್ರಮ ಅಲ್ಲಿ,
ವಿರಹ ವೇದನೆಯ ತಳಮಳ ಇಲ್ಲಿ,
ಬರುವಳಾ ನಲ್ಲನ ಮಾತಿನಮಲ್ಲಿ?
ಕೆನ್ನೆಯ ತುಂಬ ನಗೆಯನು ಚೆಲ್ಲಿ?
ಕೇಳಲು ಕೌತುಕ ನಿಮಗಿರಲು..
ನನ್ನೀ ಕವಿತೆ ಬಣ್ಣಿಸಲು..
ಸಂಜೆಯು ಕರಗಿ ಬಂದನು ಚಂದ್ರ,
ಪ್ರೇಮಿಯ ಸುಳಿವೇ ಇಲ್ಲದ ಮಿತ್ರ.
ನಲ್ಲೆಯು ಮಾತನು ತಪ್ಪಿದಳು,
ನಲ್ಲನ ಮನವ ಚಿವುಟಿದಳು.
ಇನ್ನು, ಕೇಳಲು ಕೌತುಕ ನಿಮಗಿರದು,
ಬರೆಯುವ ತವಕ ನನಗಿರದು.
ನಲ್ಲೆಗೆ ಹೇಳಿ ಧಿಕ್ಕಾರ,
ಮುಗಿಸುವೆ ಕವಿತೆ, ನಮಸ್ಕಾರ!
Subscribe to:
Post Comments (Atom)
1 comment:
BK,
Ella ok..
adre november nalli no kavithe yaake??
Post a Comment