ಇನ್ನು ಎಷ್ಟು ದಿನ ಅಂತ ನಾನ್ ಮಾಡಿದ ಚಟ್ನೀನೆ ತಿಂತ ಇರ್ತೀರಾ..ಸಾಕು ಬಿಡಿ..ನಂಗೂ ವಯಸ್ಸಾಯಿತು. ಇಷ್ಟು ಜೋರಾಗಿ ಓಡೋಕೆ ನನ್ ಕಯ್ಯಲ್ಲಿ ಆಗೋಲ್ಲ ಎಂದನ್ತಿತ್ತು ಅಡುಗೆ ಮನೆಯಲ್ಲಿ ಮಿಕ್ಸಿ..ಜೋರು ಶಬ್ದ ಅದರಿಂದ..ಎಲ್ಲೋ ಮಾರವಾಡಿ ಅಂಗಡೀಲಿ ಧೂಳು ತಿನ್ತ ಆರಾಮಾಗಿ ಜೀವನ ಸಾಗಿಸ್ತ ಇದ್ದೆ..ಅಲ್ಲಿಂದ ತಂದು ನಿಮ್ಮನೆ ಗೋಡೆಗೆ ನೇತು ಹಾಕಿ ಈ ಪಾಟಿ ಕೆಲಸ ಮಾಡಿಸ್ತ ಇದಿಯಲ್ಲ, ನ್ಯಾಯನ ಇದು..ಅನ್ದಂತಿತ್ತು ನನ್ ರೂಮಿನ ಫ್ಯಾನು..ಜೋರು ಶಬ್ದ ಅದರಿಂದ..
ದಿನವು ಇಂತಹ ನೂರಾರು ಪ್ರಶ್ನೆಗಳನ್ನು ಸ್ವೀಕರಿಸುತ್ತಿದ್ದ ಮನಸ್ಸು ಇಂದೇಕೋ ಮುಷ್ಕರ ಹೂಡಿ ಬಿಟ್ಟಿದೆ. ಯಾವುದೇ ಪ್ರಶ್ನೆಗಳನ್ನು, ಕರೆಗಳನ್ನು ರಿಸೀವ್ ಮಾಡುತ್ತಿಲ್ಲ..ನಾಟ್ reachable ..ಇವತ್ತು ಮನಸ್ಸು ಖಾಲಿ ಖಾಲಿ..ಹೇಳಬೇಕಾದ ಅನಿಸಿಕೆಗಳು ಎಷ್ಟೊಂದಿವೆ..ಆದರೆ ಮನಸಿನ ಮುಷ್ಕರದ ಕಾರಣ, ಅವುಗಳಲ್ಲಿ ಎಷ್ಟು, ಪದಗಳಾಗಿ ಹುಟ್ಟುತ್ತವೋ ನೋಡಬೇಕಿದೆ. ಬರೆಯುವ ವಿಫಲ ಯತ್ನ ಮಾಡಬೇಕಿದೆ.
ಇವ್ರು ನಮ್ ಟೈಪು ಅಂತ ಅನ್ನಿಸೋಕೆ ಒಂದೆರೆಡು ಕಾರಣ ಸಿಕ್ಕರೆ ಸಾಕು, ಗೆಳೆತನ ತಾನೇ ತಾನಾಗಿ ಬೆಳಿಯೋಕೆ ಶುರುವಾಗತ್ತೆ. ನಿನ್ನ ಮೊದಲು ನೋಡಿದಾಗ ಅನ್ನಿಸ್ಸಿದ್ದು ಇದೇ..ಇವ್ರು ನಮ್ ಟೈಪು..ಗುರು ಪತ್ನಿ ಅನ್ನೋ ಪಾಯಿಂಟ್ ಬೇರೆ..ನಮ್ಮೊವ್ರು ಅನ್ನಿಸೋಕೆ.ಅಲ್ಲಿಂದ ಸಲೀಸಾಗಿ ಶುರು ಆಯಿತು ಗೆಳೆತನ..
ಅವತ್ತಿಂದ ಇವತ್ತಿನ ತನಕ ಎಷ್ಟೆಲ್ಲಾ ಮಾತಾಡಿದೀವಿ..
Multitasking, IISC, thesis, defence, aacld, ac3, ನಿನ್ ಮಗಳು, ಅವಳ ಸ್ಕೂಲು, ಅಲ್ಲಿ ನಡೀತಿದ್ದ orange day, pink day, teacher's day, ನಿಮ್ಮನ್ಲೇನ್ ತಿಂಡಿ ನಮ್ಮನ್ಲೇನ್ ತಿಂಡಿ, ಯಾಕೋ ಬೋರು, ಸವಾರಿ ಸಿನ್ಮ..ಸಿಗದ ಟಿಕೇಟು, ಶ್ರಷ್ಟಿ, ಮಂಗಳ ಗೌರಿ, ಮರದ ಬಾಗಿನ, ಬಾಳೆ ಗೊನೆ, ಟೈಮೇ ಸಾಕಾಗಲ್ಲ..ನಿಂಗೆ?, ಸ್ವಂತ ಮನೇನಾ ಬಾಡಿಗೆ ಮನೇನಾ, ಇಂಡಿಯಾನ ಫಾರಿನ್ನ, ನಂಗ್ porting ಇಷ್ಟ ಇಲ್ಲ, ಹೊಸ್ದೆನಾದ್ರು ಮಾಡ್ಬೇಕು, ಏನಾರ ಕಿತ್ ಹಾಕ್ಬೇಕು, AES ಪಪೆರ್ರು, ADL aarticallu , ಕೇರೆ ಮಾಡ್ದ ಜನ, ಅವರ ಅಹಂ, ನನ್ನ ಕಿತ್ ಹೋದ ಜೋಕು ಗಳು, ಯಾಕೋ ದೊಡ್ದೊವ್ರ್ ಹೀಗೆ?, ನಮ್ ಲೈಫು ನಂದು ಬಿಟ್ಬಿಡ್ರಪ್ಪ, ಇಲ್ಲಿ ಜನ ತುಂಬ ಸ್ವಾರ್ಥಿಗಳು, PRPD, processu, compliance, TNS, AAC delay,MPEG surroundu, presentationnu - ಅಲ್ಲಿ ಪ್ರದರ್ಶನ ಗೊಂಡ ಜನರ ಹಮ್ಮು ಬಿಮ್ಮುಗಳು, ಅದರಿಂದ ನಿನಗಾದ ಬೇಜಾರು, ನಾನು..ನನ್ ಗೋಳು, ಅದನ್ ಪ್ರಶಾಂತವಾಗಿ ಕೇಳಿಸಿಕೊಂಡ ನಿನ್ನ ಕಿವಿಗಳು, ಕೊನೆಗೂ ಸಿಕ್ತು ಸಿನ್ಮ ಟಿಕೇಟು..ಬೊಂಬಾಟ್ ಪಂಚರಂಗಿ, ಪಂಚರಂಗಿ ಹ್ಯಾಂಗೊವರ್ಗಳು, juice junction ನ್ನು, ಟೈಮ್ ಪಾಸು, ಕೊನಾರ್ಕ್ ದೋಸೆ, ಬೈಟು ಕಾಪಿ, ನಿಮ್ಮನೆಗೆ ಊಟಕ್ ಯಾವಾಗ್ ಕರೀತಿಯ..ಅಯ್ಯೋ ನಮ್ಮನೇಲಿ ಯಾರಗೂ ಹುಶಾರೆ ಇಲ್ಲ..ಕರೀತಿನ್ ಇರಪ್ಪ..
ಇಷ್ಟೇ ಬರಿಯೋಕ್ ಆಗಿದ್ದು..ನಾಳೆಯಿಂದ ನೀನು ಬರೋಲ್ಲ..Sure ah????
Subscribe to:
Post Comments (Atom)
No comments:
Post a Comment