Monday, November 1, 2010

ಟ್ರೆಕ್ಕಿಂಗು ಬೇಕ ಗುರು?

ಬೆಟ್ಟ ಗಿಟ್ಟ ಹತ್ತುವಂಥ ಹುಮ್ಮಸ್ಸಲ್ಲಿ
ವಿ.ಪಿ.ಯನ್ನು ಕರೆದೆ ನಾನು ಆಫೀಸಲ್ಲಿ
ಅವನಲ್ಲೊಂದು ಪ್ರಶ್ನೆ ಇತ್ತು ಮನಸ್ಸಲ್ಲಿ
ಟ್ರೆಕ್ಕಿಂಗು ಬೇಕ ಗುರು?

ಇಂಥದ್ದೊಂದು ಪ್ರಶ್ನೆಯನ್ನು ಇಟ್ಟುಕೊಂಡು
ಕೆಂಪು ಬಸ್ಸಲ್ ನಾವುಗಳು ಕೂತುಕೊಂಡು
ಕಾಣದ ಊರಿಗೆ ಹೋಗೇ ಬಿಟ್ವಿ  ಕೇಳಿಕೊಂಡು-
ಟ್ರೆಕ್ಕಿಂಗು ಬೇಕ ಗುರು?

 ನಾನು ವಿ.ಪಿ. ತುಂಬಾ ಫಿಟ್ಟು ಅನ್ಕೊಂಡಿದ್ದು
ಎಂಥ ಬೆಟ್ಟ ಕೂಡ ನಮಗೆ ಸುಲಭದ ತುತ್ತು
ಸ್ವಲ್ಪ ದೂರ ಹೋಗ್ತಿದ್ ಹಾಗೆ ಗೊತ್ಹಾಗ್ ಹೋಯ್ತು
ಟ್ರೆಕ್ಕಿಂಗು ಬೇಕ ಗುರು? 

ಅಂತೂ ಇಂತು ಬೆಟ್ಟದ ತುದಿಗೆ ಹೋಗಿ ಕೂತು
ತಂದಿದ್ ತಿಂಡಿeನ್ ಬಿಚ್ಚೋ ಹೊತ್ತಿಗ್ ಮಳೆ ಬಂತು
ಗಟ್ಟಿ ಚಟ್ನಿ ನೀರಾದಾಗ ಅನ್ನಿಸ್ತಿತ್ತು
ಟ್ರೆಕ್ಕಿಂಗು ಬೇಕ ಗುರು? 

ಹಾಕಿದ ಬಟ್ಟೆ ಎಲ್ಲ ಮಣ್ಣು, ಒದ್ದೆ, ಮುದ್ದೆ
ಇಳಿಯೋವಾಗ ಮೂರ್ನಾಕ್ ಸರಿ ಜಾರಿ ಬಿದ್ದೆ
ವಿ.ಪಿ. ಕಾಲು ಹಿಡ್ಕೊಂಡು ಬಿಡ್ತು ದಾರಿ ಮಧ್ಯೆ
ಟ್ರೆಕ್ಕಿಂಗು ಬೇಕ ಗುರು? 

ರಕ್ತ ದಾನ ಮಾಡಿಸ್ಬಿಟ್ವು ಜಿಗಣೆಗಳು
ದಾರಿ ಪೂರ ಕ್ರಿಮಿ, ಕೀಟ, ಹಾವುಗಳು
ಕೋರಸ್ ನಲ್ಲಿ ನಮ್ಮ ಇಂಥ ಹಾಡುಗಳು
ಟ್ರೆಕ್ಕಿಂಗು ಬೇಕ ಗುರು?
ಬೇಕ ಗುರು?ಬೇಕ ಗುರು?

1 comment:

Deepak K said...

ನಮ್ಮ ಬೆಂಗಳೂರುನಲ್ಲಿ ಹಸಿರು ಕಾಣುವುದೇ ಈಗ ಚೂರು
ಟ್ರೆಕ್ ಇಲ್ಲದೆ ಕಣ್ಣಿಗೆ ಅನಂದವಾಗುವುದು ಯಾವಾಗ ಗುರು
ಮಳೆ ಬಂದರೆ ಮುಳುಗುವುದು ನಮ್ಮ ಊರು
ಟ್ರೆಕ್ ಇಲ್ಲದೆ ನಾವು ಮಳೆಯಲ್ಲಿ ಕುಣಿಯುವುದು ಯಾವಾಗ ಗುರು

ಟ್ರೆಕ್ ಇಲ್ಲದೆ ನೆನಪುಗಳು ಬರೀ ಬೋರು ಗುರು
ಅದಕ್ಕೆ ಟ್ರೆಕ್ ಬೇಕು ಗುರು !!

ನನಗೂ ಟ್ರೆಕ್ ಹೋಗಬೇಕು ಎನ್ನುವ ಆಸೆ ಗುರು
ಆದರೂನು ಹೋಗದೆ ಇರುವೆ ಗುರು
ನಾವೆಲ್ಲರೂ ಸೇರಿ ಹೋದರೆ ಅದರ ಮಜಾನೇ ಬೇರೆ ಗುರು