ಶಿವರಾಜ್ಕುಮಾರ್ ಗೆ ಕನ್ನಡ ಚಿತ್ರ ರಂಗದಲ್ಲಿ ಬೆಳ್ಳಿ ಹಬ್ಬದ ಸಂಭ್ರಮ."ಗೀಚು"ವಿಗೆ ೫೦ರ ಸಂಭ್ರಮ.ಶಿವರಾಜ್ಕುಮಾರ್ ಚಿತ್ರಗಳಲ್ಲಿ ಎಷ್ಟು ಓಡಿವೆಯೋ, ಇಲ್ಲಿರುವ ಒಳ್ಳೆ ಬರಹಗಳ ಸಂಖ್ಯೆ ಅಷ್ಟೇ.
ನನಗೆ ಪದಗಳನ್ನು ಪೋಣಿಸುವುದು ಎಂದರೆ ಇಷ್ಟ.ಭಾವಕ್ಕೆ ಅಕ್ಷರ ರೂಪವನ್ನು ಕೊಡುವುದರಲ್ಲಿ ಒಂಥರಾ ಮಜಾ. ಅದು, ಸುಡೋಕು ಮುಗಿಸಿದ ನಂತರ ಸಿಗುವಂಥ ಆನಂದ.ಹೇಳಬೇಕಾದ್ದನ್ನು ಅಚ್ಚುಕಟ್ಟಾಗಿ ಹೇಳುವುದರಲ್ಲಿ ಒಂದು ಕಿಕ್ ಇರುತ್ತದೆ.ಇಂಥ ಪುಟ್ಟ ಸಂತೋಷಗಳಿಗಾಗಿ ಬರೆದ ಬರಹಗಳು ಇಲ್ಲಿವೆ.ನನ್ನೆಲ್ಲಾ ಘನಘೋರ ಸೋಮಾರಿತನದ ಹೊರತಾಗಿಯೂ ಇಲ್ಲಿಯ ತನಕ ಬಂದಿದ್ದೇನೆ. ಖುಷಿಯಾಗಿದೆ.ಇಷ್ಟನ್ನು ಬರೆಯುವುದಕ್ಕೆ ೪ ವರ್ಷಗಳು ಬೇಕಾಯಿತು ಅನ್ನುವುದು ಮುಜುಗರದ ಸಂಗತಿ.೫೦ ಬರಹಗಳಿವೆ. ಓದಿಸಿಕೊಂಡರೆ ಓದಿ ಖುಷಿಪಡಿ. ಓದಿಸಿ ಕೊಂದರೆ, ಕ್ಷಮೆ ಇರಲಿ :)
ನನಗೆ ಅಕ್ಷರಗಳಷ್ಟೇ ಪ್ರೀತಿ, ಸಂಖ್ಯೆಗಳ ಮೇಲೆ. ಕೂಡುವ ಕಳೆಯುವ ಲೆಕ್ಕಗಳು ಇಷ್ಟ. ಹಾಗಾಗಿ ೫೦ರ ಈ ಲೆಕ್ಕಕ್ಕೆ ಸಂಭ್ರಮ.
ಶಿವರಾಜ್ಕುಮಾರ್ ಉಚ್ಚಾರದಷ್ಟೇ ಸ್ಪಷ್ಟ ಇಲ್ಲಿರುವ ಬರಹಗಳು.
ಪ್ರೀತಿ ಇರಲಿ.
1 comment:
yenoo bk.. parvaagilla.. Ee tharaha kannada nuu barutte ninge.. :)
Post a Comment