ಹಂಬಲದ ದಾಹ..ಎಂದೂ ತೀರದ ಮೋಹ..
ದುರಹಂಕಾರಿಯ ಗರ್ವ, ಸೋಲಿನ ಮೊದಲನೇ ಪರ್ವ..
ಅನ್ನಕ್ಕೆ ವಗ್ಗರಣೆ..ಅರ್ಘ್ಯಕ್ಕೆ ಉದ್ಧರಣೆ..
ಆಡುವ ಮಾತಲಿ ಅರ್ಥ, ಇರದೇ ಇದ್ದರೆ ವ್ಯರ್ಥ..
ನೆನಪಿರದ ಕನಸು..ಕೂಡಿಟ್ಟ ಮುನಿಸು..
ನೈಜತೆ ಇಲ್ಲದ ಬದುಕು, ತೊಳೆಯಲು ಆಗದ ಕೊಳಕು..
ಪಾರ್ಥನಿಗೆ ಕೃಷ್ಣ, ನಮಗೆ ಯಾರೋ? ಎತ್ತ?
No comments:
Post a Comment