ನಿನ್ನೆ ಎನ್ನುವುದು ಒಂದು ನೆನಪು. ನಾಳೆ ಎನ್ನುವುದು ಒಂದು ಕನಸು.
ನಿನ್ನೆಗಳನ್ನು ಮೆಲಕು ಹಾಕುವುದು, ನೆನಪುಗಳನ್ನು ಜೋಪಾನ ಮಾಡುವುದು ರೂಢಿ!
ನಾಳೆಗಳನ್ನು ಕಾಯುವುದು, ಕನಸುಗಳನ್ನು ಕಟ್ಟುವುದು ಸಹಜ.
ಆದರೆ ನಿನ್ನೆ ಮತ್ತು ನಾಳೆ ಎರಡೂ ಸುಳ್ಳು.
ನಿನ್ನೆ - ಕಳೆದು ಹೋದ ಗೆಳತಿಯ ತರಹ..
ನಾಳೆ - ಕಲ್ಪನಾ ಲೋಕದ ಸ್ನಿಗ್ಧ ಸೌಂದರ್ಯವತಿಯ ಹಾಗೆ.
ನಿನ್ನೆಗಳನ್ನು ಕುರಿತು ಯೋಚಿಸುವುದು, ನಾಳೆಗಳ ಬಗ್ಗೆ ಕನಸುವುದು ಈಗಿನ ಸಮಯವನ್ನು ಕಳೆಯುವುದಕ್ಕಷ್ಟೇ ಸಹಾಯಕ.
ಅವುಗಳಿಂದ ಮತ್ತೇನು ಪ್ರಯೋಜನವಿಲ್ಲ.
ಹಾಗಾಗಿ ಈಗಿನ ಕ್ಷಣಗಳನ್ನು ಅಷ್ಟೇ ಅನುಭವಿಸೋಣ..ನಿನ್ನೆ ನಾಳೆಗಳ ಬಗ್ಗೆ ಯೋಚನೆ ಬೇಡ ಎಂದು ಹೇಳುವುದು, ಬರೆಯುವುದು ಚೆಂದ.
No comments:
Post a Comment