Sunday, October 12, 2008

ಹೀಗೊಂದು ಕವಿತೆ

ಮೋಡವು ಮಳೆಯನು ಚೆಲ್ಲಿರಲು,
ಭೂಮಿಯು ಅದರಲಿ ಮಿಂದಿರಲು,
ನಲ್ಲನು ನಲ್ಲೆಗೆ ಕಾದಿರಲು,
ಬರುವಳಾ ಸುಂದರಿ ಜೊತೆಗಿರಲು?

ಕೇಳಲು ಕೌತುಕ ನಿಮಗಿರಲು..
ನನ್ನೀ ಕವಿತೆ ಬಣ್ಣಿಸಲು..

ಮಿಲನ ಮಹೋತ್ಸವ ಸಂಭ್ರಮ ಅಲ್ಲಿ,
ವಿರಹ ವೇದನೆಯ ತಳಮಳ ಇಲ್ಲಿ,
ಬರುವಳಾ ನಲ್ಲನ ಮಾತಿನಮಲ್ಲಿ?
ಕೆನ್ನೆಯ ತುಂಬ ನಗೆಯನು ಚೆಲ್ಲಿ?

ಕೇಳಲು ಕೌತುಕ ನಿಮಗಿರಲು..
ನನ್ನೀ ಕವಿತೆ ಬಣ್ಣಿಸಲು..

ಸಂಜೆಯು ಕರಗಿ ಬಂದನು ಚಂದ್ರ,
ಪ್ರೇಮಿಯ ಸುಳಿವೇ ಇಲ್ಲದ ಮಿತ್ರ.
ನಲ್ಲೆಯು ಮಾತನು ತಪ್ಪಿದಳು,
ನಲ್ಲನ ಮನವ ಚಿವುಟಿದಳು.

ಇನ್ನು, ಕೇಳಲು ಕೌತುಕ ನಿಮಗಿರದು,
ಬರೆಯುವ ತವಕ ನನಗಿರದು.
ನಲ್ಲೆಗೆ ಹೇಳಿ ಧಿಕ್ಕಾರ,
ಮುಗಿಸುವೆ ಕವಿತೆ, ನಮಸ್ಕಾರ!

Monday, October 6, 2008

Dream girl

ನೀನೋ ಬಲು ಬೆಳ್ಳಗೆ !
ಜೊತೆಗೆ ಮುಡಿದ ಮಲ್ಲಿಗೆ !!

ನಿನ್ನ ನೋಡಿ ಚಂದ್ರಮ,
ಪಟ್ಟನಂತೆ ಸಂಭ್ರಮ !!

ನೀನಲ್ಲವೇ ನನ್ನ ನೀರೆ !
ಮಧುರ ಪ್ರೇಮ ಕಾವ್ಯಧಾರೆ !!
ನೀನು ಬೇಡ ಎನ್ನದಿರೆ,
ನಾನಲ್ಲವೇ ನಿನ್ನ ದೊರೆ !!

Saturday, October 4, 2008

A Bird

ಬಾನಲಿ ಹಾರುತಿತ್ತು ಒಂದು ಹಕ್ಕಿ
ಮೆಲ್ಲಗೆ ಹಾಡುತ್ತಿತ್ತು ಭಾವ ಉಕ್ಕಿ !!
ಗೆಳೆಯನ ನೆನೆದಂತಿತ್ತು ಪುಟ್ಟ ಹಕ್ಕಿ
ಬೇಸರದಿ ಅಳುತಲಿತ್ತು ಬಿಕ್ಕಿ ಬಿಕ್ಕಿ !!

ಏನೆಂದು ಕೇಳಲು ಹೋಗಿ ನಾನು,
ಮೌನವ ತಾಳಿತು ರಾಣಿ ಜೇನು.
ಮೌನದಿ ಅರ್ಥವ ಕಂಡೆ ನಾನು,
ದೂರವಾಗಿ ಹೋದನಂತೆ ಅವಳ ವೇಣು.

"ನನ್ನದು ನಿನ್ನಂತೆಯೇ ದುರಂತ ಕಥೆ
ಪ್ರೇಮಿಯು ಇದ್ದರೂ ಇಲ್ಲದಂತೆ !!
ಭಗ್ನಪ್ರೇಮ ಕಥೆಗಳಿವು ಎಷ್ಟೋ ಅಂತೆ
ಧೈರ್ಯ ಮಾಡಿ ನಡೆಮುಂದೆ" ಎಂದು ಹೇಳಿಬಂದೆ.

ಬಾನಲಿ ಹಾರುತಿತ್ತು ಒಂದು ಹಕ್ಕಿ
ಮೆಲ್ಲಗೆ ಹಾಡುತಿತ್ತು ಭಾವ ಉಕ್ಕಿ.