Tuesday, February 10, 2009

Sರು

ಪ್ರೀತಿಸ್ವಾಗ ಏಸರ್ ನೋಡ್ಕಂಡ್
ಪ್ರೀತಿಸ್ಕೊಬೇಕ್ ಅನ್ಸುತ್ತೆ.
ಏಸರ್ ತುಂಬ ಸಿಂಪಲ್ ಆದ್ರೆ
ಭಾರಿ ಪಜೀತಿ ಆಗತ್ತೆ.

ಕನಸ್ ಕಣ್ಡೌಲು ಕಯ್ ಇಡ್ಲಂದ್ರೆ
ಸ್ವರ್ಗಕ್ ಮೂರೇ ಸ್ಟೆಪ್ ಅಂತೆ..
ಒಂದ್ವೇಳೆ ಅದ್ ಅಗ್ಲಿಲ್ಲಂದ್ರೆ
ಜೀವನ ಬರ್ಬಾದ್ ಆದಂಗೆ.

ಓದೋವ್ಲ್ ಓದ್ಲು ಇನ್ಯಾಕ್ ಚಿಂತೆ
ಅನ್ತ್ನೀನ್ ಅನ್ಕಂಡ್ ಹೊರಟ್ರೆ
ಕಪಿಯಂಗ್ ಆಡ್ತೈತ್ ನಿನ್ ಒಳ್ ಮನ್ಸು
ಅವಳ್ ಎಸ್ರ್ ಎಲ್ಲಾರ್ ಕಾಣ್ಸಿದ್ರೆ.

ಮನೆ ಮುಂದೆ, ಕಾರಿನ್ ಹಿಂದೆ,
ಅಂಗ್ಡಿ ಮ್ಯಾಲೆ, ಲಾರಿ ಕೆಳ್ಗೆ..
ಎಲ್ಲೆಂದ್ರಲ್ಲಿ ಅವ್ಳೆಸ್ರು
ಕಟ್ದಂಗ್ ಆಗ್ತದ್ ನಿಂಗ್ ಉಸ್ರು.

ಹಿಂಗವ್ಳೆಸ್ರು ಕಂಡಾಗೆಲ್ಲ
ಅಣೆ ಕಟ್ ಮುರ್ದಿದ್ ನದಿಯಂಗೆ
ನೆನ್ಪಿನ್ ಬುತ್ತೀನ್ ಬಿಚ್ಕಂಡ್ ಬಂದು
ಜಾಡ್ಸಿ ಎದೆಗೆ ಒದ್ದಂಗೆ.

ಕಾಡ್ತಾ ಇದ್ರೆ ನಿಂಗ್ ಅವಳ್ನೆನ್ಪು
ನಿಂಗಾಗ್ ಅನ್ಸೆ ಅನ್ಸುತ್ತೆ..
'ಪ್ರೀತ್ಸೋವಾಗ ಎಸ್ರ್ ನೋಡ್ಕಂಡ್
ಪ್ರೀತಿಸ್ಬೇಕಿತ್ ಅನ್ಸುತ್ತೆ '


Sunday, February 8, 2009

ಒಂದ್ ಸಮಸ್ಯೆ

ಅಮ್ಮ ಮನೆಯೊಳಗಿಲ್ಲ..ರಾಮ..ರಾಮ
ನಂದೇ ಅಡ್ಗೆ ನಂದೇ ತಿಂಡಿ..ನನಗಿಲ್ಲ ವಿರಾಮ.
ಅಪ್ಪಂಗೆ ಕೆಲಸವಂತೆ..ಬೆಳ್ಗೇನೆ ಪರಾರಿ.
ತಮ್ಮಿನ್ನು ಚಿಕ್ಕೊವ್ನ್ರಿ, ಮಲ್ಗೊವ್ನೆ ಸೋಮಾರಿ.

ಚಿಕ್ಲೋಟ್ದಲ್ ಕಾಪೀನ ಬೆರಸ್ ಬೇಕಂತೆ..
ಹಾಲೆಷ್ಟೋ, ಸೀ ಎಷ್ಟೋ, ನಂಗ್ ನಂದೇ ಅಳ್ತೆ..
ಕಾಪಿನ್ ಕುಡಿದ್ ಅಮ್ಮಂದ್ಲು 'ನೀನ್ ಬಲೆ ಬೆಪ್ಪು'
'ಕಾಪಿಗ್ ಬೇಕಾದ್ದು ಸೀ ಕಣೋ..ನೀ ಹಾಕಿದ್ ಉಪ್ಪು' !

ಹೀಗೆ ನನ್ ನಳಪಾಕ ಮುಂದಕ್ಕೂ ಸಾಗ್ತು..
ಹೇಳ್ತಾನೆ ಹೋದ್ರೆ ಹಾಳೆನೆ ಸಾಲ್ದು..
ಪ್ರತಿ ತಿಂಗಳು ಬರ್ತವೆ ಇಂಥ ಮೂರ್ದಿನ..
ಹುಡ್ಕ್ಬೇಕ್ರೀ ಸಮಸ್ಯೆಗೆ ಪರಿಹಾರ ಒಂದಿನ!

ಅಮ್ಮ ಮನೆಯೊಳಗಿಲ್ಲ ರಾಮ..ರಾಮ..
ಅಡ್ಗೆನು ನಂದೇ..ತಿನ್ಡಿನು ನಂದೇ..
ನಾನೇನ ಕಲಿಯುಗದ ಭೀಮ?