Sunday, November 7, 2010

ಏನಪ್ಪಾ..ಗೊತ್ತಾಗತ್ತ...ಒಂಥರಾ...ಅಷ್ಟಷ್ಟಷ್ಟೇ!!

ಸಮಯ ಬೆಳಗ್ಗೆ 8.45.ಪಾರ್ಕಿಂಗ್ ಲಾಟ್ ಅಲ್ ಸೈಕಲ್ ನಿಲ್ಸಿ, ಕ್ಲಾಸ್ ನಡಿತಿರೋದು ರೂಂ ನಂ 212 ಅಲ್ಲೋ ಅಥವಾ 312 ಅಲ್ಲೋ ಅನ್ನೋ confusion ಅಲ್ಲೇ 212 ರ ಮುಂದೆ ಬಂದು ನಿಂತೆ. ಕ್ಲಾಸ್ ಶುರುವಾಗಿ 15 ನಿಮಿಷ ಆಗಿತ್ತು. "May i come in sir" ಅಂದೆ. "ಬಾಪ್ಪ, tuition ಈಗ ಮುಗೀತಾ? ಸ್ವಲ್ಪ ಸುಧಾರಿಸಿಕೊಂಡು ಎರಡ್ ನಿಮಿಷ ಆದ್ಮೇಲ್ ಬರಕೋ " ಅಂದ್ರು ಮೇಷ್ಟ್ರು. "how nice of him?" ಅನ್ನಿಸ್ತು. ಮಾರನೆ ದಿನವೂ ಅದೇ ಸನ್ನಿವೇಶ. ಆದರೆ dialogue ಮಾತ್ರ ಬೇರೆ. "May i come in sir" ಅಂದೆ. "ಏನಪ್ಪಾ..ನೀನು ಇಷ್ಟ್ ಲೇಟ್ ಆಗಿ ಬರೋದಾದ್ರೆ ಕ್ಲಾಸ್ ಗೆ ಬರಲೇ ಬೇಡ..tuition ಅಲ್ ಎಲ್ಲ ಕಲ್ತ್ಕೊತಿನಿ, ಕಾಲೇಜ್ ಗೆ ಬರೋದ್ ಕಾಟಾಚಾರಕ್ಕೆ ಅನ್ನೋ ಅಹಂಕಾರ ನಿಂಗೆ..ಗೊತ್ತಾಗತ್ತ..ಬಾ ಒಳಗೆ"..GSS ಸರ್ ಇದ್ದಿದ್ದೆ ಹಾಗೆ..ಅವ್ರು ಯಾವಾಗ ಹ್ಯಾಗಿರ್ತಾರೆ, ಯಾವಾಗ ಹ್ಯಾಗ್ react ಮಾಡ್ತಾರೆ ಅನ್ನೋದು ಊಹಿಸೋಕೆ ಆಗ್ತಿರ್ಲಿಲ್ಲ.

ಹದಿನೇಳು, ಹದಿನೆಂಟು ವಯಸ್ಸಿನ 110 ಮಂಗಗಳನ್ನು 25x40 ಜಾಗದಲ್ಲಿ ಕೂಡು ಹಾಕಿ, ಅವೆಲ್ಲ ಸದ್ದೇ ಮಾಡದೆ ಸತ್ತ ಹೆಣಗಳ ತರಹ ಸುಮ್ಮನೆ ಇರಬೇಕು ಅಂತ ಬಯಸುತ್ತ ಇದ್ದಿದ್ದು utter foolishness. ಜೀವನೋತ್ಸಾಹ ತುಂಬಿ ತುಳುಕೋ ವಯಸ್ಸು ಅದು. ಕ್ಲಾಸು ಸದಾ ಗಿಜುಗುಡುತಿತ್ತು. ಇದು ಅರ್ಥವಾಗಿದಿಯೇನೋ ಎಂಬಂತೆ GSS ತಮ್ಮ ಪಾಡಿಗೆ ತಾವು ಬಂದು ಬೋರ್ಡಿನ ಮೇಲೆ ಲೆಕ್ಕಗಳನ್ನ ಬರೆಯುತಿದ್ದರು. ನಾವುಗಳು ಕೊನೆಗೆ ತೆಪ್ಪಗಾಗಿ ಬರೆದು ಕೊಳ್ಳಲು ಆರಂಭಿಸುತಿದ್ದೆವು. ಆದರೆ ಒಂದಿನ ಏನಾಯ್ತೋ ಏನೋ ಗೊತ್ತಿಲ್ಲ. ಎಂದಿನಂತೆ ಗಿಜುಗುಡುತಿದ್ದ ಕ್ಲಾಸಿನೊಳಗೆ ಬಂದ GSS, "ಯಾಕ್ ಹಾಗೆ ಬಡ್ಕೋತಿದೀರ..ಯಾಕೆ ನಿಮ್ಮನೇಲಿ ಯಾರದ್ರು ಸತ್ ಹೋಗಿ ಬಿಟ್ಟಿದ್ದಾರ?" ಅಂದು ಬಿಡುವುದೇ? GSS ಇದ್ದಿದ್ದೆ ಹಾಗೆ.

GSS ಗೆ distractions ಅಂದ್ರೆ ಆಗ್ತಿರ್ಲಿಲ್ಲ. ಒಂದಿನ ಸಂದೀಪ ಕಿಟಕಿಯ ಆಚೆ ನೋಡ್ತಾ ಇದ್ದ. ಅದನ್ನು GSS ನೋಡಿ "ಏನಪ್ಪಾ, ಆ ಮರದಲ್ಲಿ ಎಷ್ಟು ಎಲೆ ಇದೆ ಅಂತ ಲೆಕ್ಕ ಹಾಕ್ತ ಇದ್ದೀಯ? ಹೋಗು..ಆ ಮರದ ಮೇಲೆ ಕೂತ್ಕೊಂಡು ಲೆಕ್ಕ ಹಾಕು..ನೀನು ಅದಕ್ಕೆ ಲಾಯಕ್ಕು..ಗೊತ್ತಾಗತ್ತ?"..ಅಂತ ಗುಡುಗಿದ್ದರು. ಕ್ಲಾಸಲ್ಲಿ ಕಾಲು ಕುಣಿಸುತಿದ್ದ ಒಬ್ಬನಿಗೆ "ಏನಪ್ಪಾ..ನಿಮ್ಮಪ್ಪ tailorra? ಹಾಗೆ ಕಾಲು ಕುಣಿಸ್ತಿಯಲ್ಲ..ಹೋಗು, ನೀನು ಅಂಗಿ ಚಡ್ಡಿ ಹೊಲ್ಕೊಂಡು ಕೂತ್ಕೋ..ಗೊತ್ತಾಗತ್ತ" ಅಂದಿದ್ದರು.

GSS ಗೆ CET ಬಲು ಮೆಚ್ಚುಗೆಯ ಟಾಪಿಕ್.."ಏನಪ್ಪಾ.CET ಇದಿಯಲ್ಲ..ಅದು ಒಂಥರಾ ಒನ್ ಡೇ ಮ್ಯಾಚ್ ಇದ್ ಹಾಗೆ..ಎಲ್ ಬೇಕಾದರು ನಿಂತ್ಕೊಂಡು batting ಮಾಡಬಹುದು..ವಿಕೆಟ್ ಹಿಂದೆ ಬೇಕಾದ್ರೂ ನಿಂತ್ಕೊಂಡ್ ಬಿಡಬಹುದು..ಬೇಗ runs score ಮಾಡ್ಬೇಕ್ ಅಷ್ಟೇ..ಆದ್ರೆ PUC ಇದಿಯಲ್ಲ, ಅದು ಒಂಥರಾ ಟೆಸ್ಟ್ ಮ್ಯಾಚ್ ಥರ..ನಿಧಾನಕ್ ಆಡಬೇಕು..ಏನಪ್ಪಾ..ಗೊತ್ತಾಗತ್ತ...ಒಂಥರಾ...ಅಷ್ಟಷ್ಟಷ್ಟೇ"     

PUC ಕಷ್ಟ, CET ಅದಕ್ಕಿಂತ ಕಷ್ಟ ಅನ್ನೋಕೆ GSS ಕೊಡ್ತಾ ಇದ್ದ ಕೆಲವು examples. "99,99,100..ಅಯ್ಯೋ ಹೇಳೋಕೇ ಸುಸ್ತಾಗತ್ತೆ..ಇನ್ನ ಅಷ್ಟ್ ಮಾರ್ಕ್ಸ್ ತೆಗಿಯೋದು ಎಷ್ಟ್ ಕಷ್ಟ ಇರಬೇಡ..ಏನಪ್ಪಾ..ಗೊತ್ತಾಗತ್ತ?..ಒಂಥರಾ ತುಂಬಾ ಕಷ್ಟ ಇದೆ..ಆಮೇಲೆ PUC ಲಿ ಮಾರ್ಕ್ಸ್ ಬಂದ್ರೆ CET ಲಿ ಬರತ್ತೆ ಅಂತೇನಿಲ್ಲ..CET , PUC ಎರಡು ಒಂಥರಾ ತುಂಬಾ different ಇದೆ..PUC ಲಿ ಒಳ್ಳೆ ಮಾರ್ಕ್ಸ್ ಬಂದರೂ CET rank ಒಂದೊಂದ್ ಸಲ ಎಲ್ಲೋ ಹೊರಟ್ ಹೋಗತ್ತೆ...ರಂಜನಿ ಗೊತ್ತ ರಂಜನಿ..PUC ಲಿ 99,99,100..ಆಮೇಲೆ CET ಎಷ್ಟ್ ಗೊತ್ತ? 302 ..ಅಲ್ಲ ಒಂಥರಾ ಫುಲ್ down ಆಗ್ ಹೋಯ್ತಲ್ಲ..ಏನಪ್ಪಾ..ಗೊತ್ತಾಗತ್ತ..ಏನಮ್ಮ..ಗೊತ್ತಾಗತ್ತ.."

"ಕೆಲವರಿದಂತು CET rank ಯಾವ ಥರ ಇರತ್ತೆ ಗೊತ್ತ..Software engineer salary ಥರ..ಎಷ್ಟಪ್ಪ ನಿನ್ ranku ಅಂದ್ರೆ..25000 ,30000.. ಹೀಗ್ ಹೇಳ್ತಾರೆ...ಅದಕ್ಕೆ CET ಒಂಥರಾ ತುಂಬಾ ಕಷ್ಟ ಇದೆ..ಏನಪ್ಪಾ..ಗೊತ್ತಾಗತ್ತ...ಒಂಥರಾ...ಅಷ್ಟಷ್ಟಷ್ಟೇ ". GSS ಇದ್ದಿದ್ದೆ ಹಾಗೆ.

ಈಗಲೂ NCJ, PCM * ಬಾಯ್ಸ್ (ಬಾಯ್ಸ್ ಅಷ್ಟೇ contact ಅಲ್ ಇರೋದು)  ಎಲ್ಲೇ ಸಿಕ್ರೂ, GSS ಬಗ್ಗೆ ಮಾತಾಡದೆ ಮಾತು ಮುಗಿಯೋದೇ ಇಲ್ಲ..ಅಷ್ಟರ ಮಟ್ಟಿಗೆ ನಮಗೆ ನೆನಪುಗಳನ್ನ ಕಟ್ಟಿ ಕೊಟ್ಟ GSS sir ಗೆ ಥ್ಯಾಂಕ್ಸ್. Thank you Sir... 
 

Monday, November 1, 2010

ಟ್ರೆಕ್ಕಿಂಗು ಬೇಕ ಗುರು?

ಬೆಟ್ಟ ಗಿಟ್ಟ ಹತ್ತುವಂಥ ಹುಮ್ಮಸ್ಸಲ್ಲಿ
ವಿ.ಪಿ.ಯನ್ನು ಕರೆದೆ ನಾನು ಆಫೀಸಲ್ಲಿ
ಅವನಲ್ಲೊಂದು ಪ್ರಶ್ನೆ ಇತ್ತು ಮನಸ್ಸಲ್ಲಿ
ಟ್ರೆಕ್ಕಿಂಗು ಬೇಕ ಗುರು?

ಇಂಥದ್ದೊಂದು ಪ್ರಶ್ನೆಯನ್ನು ಇಟ್ಟುಕೊಂಡು
ಕೆಂಪು ಬಸ್ಸಲ್ ನಾವುಗಳು ಕೂತುಕೊಂಡು
ಕಾಣದ ಊರಿಗೆ ಹೋಗೇ ಬಿಟ್ವಿ  ಕೇಳಿಕೊಂಡು-
ಟ್ರೆಕ್ಕಿಂಗು ಬೇಕ ಗುರು?

 ನಾನು ವಿ.ಪಿ. ತುಂಬಾ ಫಿಟ್ಟು ಅನ್ಕೊಂಡಿದ್ದು
ಎಂಥ ಬೆಟ್ಟ ಕೂಡ ನಮಗೆ ಸುಲಭದ ತುತ್ತು
ಸ್ವಲ್ಪ ದೂರ ಹೋಗ್ತಿದ್ ಹಾಗೆ ಗೊತ್ಹಾಗ್ ಹೋಯ್ತು
ಟ್ರೆಕ್ಕಿಂಗು ಬೇಕ ಗುರು? 

ಅಂತೂ ಇಂತು ಬೆಟ್ಟದ ತುದಿಗೆ ಹೋಗಿ ಕೂತು
ತಂದಿದ್ ತಿಂಡಿeನ್ ಬಿಚ್ಚೋ ಹೊತ್ತಿಗ್ ಮಳೆ ಬಂತು
ಗಟ್ಟಿ ಚಟ್ನಿ ನೀರಾದಾಗ ಅನ್ನಿಸ್ತಿತ್ತು
ಟ್ರೆಕ್ಕಿಂಗು ಬೇಕ ಗುರು? 

ಹಾಕಿದ ಬಟ್ಟೆ ಎಲ್ಲ ಮಣ್ಣು, ಒದ್ದೆ, ಮುದ್ದೆ
ಇಳಿಯೋವಾಗ ಮೂರ್ನಾಕ್ ಸರಿ ಜಾರಿ ಬಿದ್ದೆ
ವಿ.ಪಿ. ಕಾಲು ಹಿಡ್ಕೊಂಡು ಬಿಡ್ತು ದಾರಿ ಮಧ್ಯೆ
ಟ್ರೆಕ್ಕಿಂಗು ಬೇಕ ಗುರು? 

ರಕ್ತ ದಾನ ಮಾಡಿಸ್ಬಿಟ್ವು ಜಿಗಣೆಗಳು
ದಾರಿ ಪೂರ ಕ್ರಿಮಿ, ಕೀಟ, ಹಾವುಗಳು
ಕೋರಸ್ ನಲ್ಲಿ ನಮ್ಮ ಇಂಥ ಹಾಡುಗಳು
ಟ್ರೆಕ್ಕಿಂಗು ಬೇಕ ಗುರು?
ಬೇಕ ಗುರು?ಬೇಕ ಗುರು?