Thursday, September 23, 2010

ಓದ್ಕೋ

ಇನ್ನು ಎಷ್ಟು ದಿನ ಅಂತ ನಾನ್ ಮಾಡಿದ ಚಟ್ನೀನೆ ತಿಂತ ಇರ್ತೀರಾ..ಸಾಕು ಬಿಡಿ..ನಂಗೂ ವಯಸ್ಸಾಯಿತು. ಇಷ್ಟು ಜೋರಾಗಿ ಓಡೋಕೆ ನನ್ ಕಯ್ಯಲ್ಲಿ ಆಗೋಲ್ಲ ಎಂದನ್ತಿತ್ತು ಅಡುಗೆ ಮನೆಯಲ್ಲಿ ಮಿಕ್ಸಿ..ಜೋರು ಶಬ್ದ ಅದರಿಂದ..ಎಲ್ಲೋ ಮಾರವಾಡಿ ಅಂಗಡೀಲಿ ಧೂಳು ತಿನ್ತ ಆರಾಮಾಗಿ ಜೀವನ ಸಾಗಿಸ್ತ ಇದ್ದೆ..ಅಲ್ಲಿಂದ ತಂದು ನಿಮ್ಮನೆ ಗೋಡೆಗೆ ನೇತು ಹಾಕಿ ಈ ಪಾಟಿ ಕೆಲಸ ಮಾಡಿಸ್ತ ಇದಿಯಲ್ಲ, ನ್ಯಾಯನ ಇದು..ಅನ್ದಂತಿತ್ತು ನನ್ ರೂಮಿನ ಫ್ಯಾನು..ಜೋರು ಶಬ್ದ ಅದರಿಂದ..

ದಿನವು ಇಂತಹ ನೂರಾರು ಪ್ರಶ್ನೆಗಳನ್ನು ಸ್ವೀಕರಿಸುತ್ತಿದ್ದ ಮನಸ್ಸು ಇಂದೇಕೋ ಮುಷ್ಕರ ಹೂಡಿ ಬಿಟ್ಟಿದೆ. ಯಾವುದೇ ಪ್ರಶ್ನೆಗಳನ್ನು, ಕರೆಗಳನ್ನು ರಿಸೀವ್ ಮಾಡುತ್ತಿಲ್ಲ..ನಾಟ್ reachable ..ಇವತ್ತು ಮನಸ್ಸು ಖಾಲಿ ಖಾಲಿ..ಹೇಳಬೇಕಾದ ಅನಿಸಿಕೆಗಳು ಎಷ್ಟೊಂದಿವೆ..ಆದರೆ ಮನಸಿನ ಮುಷ್ಕರದ ಕಾರಣ, ಅವುಗಳಲ್ಲಿ ಎಷ್ಟು,  ಪದಗಳಾಗಿ ಹುಟ್ಟುತ್ತವೋ ನೋಡಬೇಕಿದೆ. ಬರೆಯುವ ವಿಫಲ ಯತ್ನ ಮಾಡಬೇಕಿದೆ.

ಇವ್ರು ನಮ್ ಟೈಪು ಅಂತ ಅನ್ನಿಸೋಕೆ ಒಂದೆರೆಡು ಕಾರಣ ಸಿಕ್ಕರೆ ಸಾಕು, ಗೆಳೆತನ ತಾನೇ ತಾನಾಗಿ ಬೆಳಿಯೋಕೆ ಶುರುವಾಗತ್ತೆ. ನಿನ್ನ ಮೊದಲು ನೋಡಿದಾಗ ಅನ್ನಿಸ್ಸಿದ್ದು ಇದೇ..ಇವ್ರು ನಮ್ ಟೈಪು..ಗುರು ಪತ್ನಿ ಅನ್ನೋ ಪಾಯಿಂಟ್ ಬೇರೆ..ನಮ್ಮೊವ್ರು ಅನ್ನಿಸೋಕೆ.ಅಲ್ಲಿಂದ ಸಲೀಸಾಗಿ ಶುರು ಆಯಿತು ಗೆಳೆತನ..

ಅವತ್ತಿಂದ ಇವತ್ತಿನ ತನಕ ಎಷ್ಟೆಲ್ಲಾ ಮಾತಾಡಿದೀವಿ..
Multitasking, IISC, thesis, defence, aacld, ac3, ನಿನ್ ಮಗಳು, ಅವಳ ಸ್ಕೂಲು, ಅಲ್ಲಿ ನಡೀತಿದ್ದ orange day, pink day, teacher's day, ನಿಮ್ಮನ್ಲೇನ್ ತಿಂಡಿ ನಮ್ಮನ್ಲೇನ್ ತಿಂಡಿ, ಯಾಕೋ ಬೋರು, ಸವಾರಿ ಸಿನ್ಮ..ಸಿಗದ ಟಿಕೇಟು, ಶ್ರಷ್ಟಿ, ಮಂಗಳ ಗೌರಿ, ಮರದ ಬಾಗಿನ, ಬಾಳೆ ಗೊನೆ, ಟೈಮೇ ಸಾಕಾಗಲ್ಲ..ನಿಂಗೆ?, ಸ್ವಂತ ಮನೇನಾ ಬಾಡಿಗೆ ಮನೇನಾ, ಇಂಡಿಯಾನ ಫಾರಿನ್ನ, ನಂಗ್ porting ಇಷ್ಟ ಇಲ್ಲ, ಹೊಸ್ದೆನಾದ್ರು ಮಾಡ್ಬೇಕು, ಏನಾರ ಕಿತ್ ಹಾಕ್ಬೇಕು, AES ಪಪೆರ್ರು, ADL aarticallu , ಕೇರೆ ಮಾಡ್ದ ಜನ, ಅವರ ಅಹಂ, ನನ್ನ ಕಿತ್ ಹೋದ ಜೋಕು ಗಳು, ಯಾಕೋ ದೊಡ್ದೊವ್ರ್ ಹೀಗೆ?, ನಮ್ ಲೈಫು ನಂದು ಬಿಟ್ಬಿಡ್ರಪ್ಪ, ಇಲ್ಲಿ ಜನ ತುಂಬ ಸ್ವಾರ್ಥಿಗಳು, PRPD, processu, compliance, TNS, AAC delay,MPEG surroundu, presentationnu - ಅಲ್ಲಿ ಪ್ರದರ್ಶನ ಗೊಂಡ ಜನರ ಹಮ್ಮು ಬಿಮ್ಮುಗಳು, ಅದರಿಂದ ನಿನಗಾದ ಬೇಜಾರು, ನಾನು..ನನ್ ಗೋಳು, ಅದನ್ ಪ್ರಶಾಂತವಾಗಿ ಕೇಳಿಸಿಕೊಂಡ ನಿನ್ನ ಕಿವಿಗಳು, ಕೊನೆಗೂ ಸಿಕ್ತು ಸಿನ್ಮ ಟಿಕೇಟು..ಬೊಂಬಾಟ್ ಪಂಚರಂಗಿ, ಪಂಚರಂಗಿ ಹ್ಯಾಂಗೊವರ್ಗಳು, juice junction ನ್ನು, ಟೈಮ್ ಪಾಸು, ಕೊನಾರ್ಕ್ ದೋಸೆ, ಬೈಟು ಕಾಪಿ, ನಿಮ್ಮನೆಗೆ ಊಟಕ್ ಯಾವಾಗ್ ಕರೀತಿಯ..ಅಯ್ಯೋ ನಮ್ಮನೇಲಿ ಯಾರಗೂ ಹುಶಾರೆ ಇಲ್ಲ..ಕರೀತಿನ್ ಇರಪ್ಪ..

ಇಷ್ಟೇ ಬರಿಯೋಕ್ ಆಗಿದ್ದು..ನಾಳೆಯಿಂದ ನೀನು ಬರೋಲ್ಲ..Sure ah????     

Saturday, September 18, 2010

ಹಬ್ಬಗಳು, ಪೂಜೆಗಳು, ಆರತಿಗಳು, ಜಯಂತಿಗಳು, ಉತ್ಸವಗಳು...

ಇವೆಲ್ಲ ನಾವುಗಳು ಒಟ್ಟಾಗಿ ಸೇರಿ ಖುಷಿಯಾಗಿರೋಕೆ ಅಂತ ಮಾಡಿಕೊಂಡ ನೆಪಗಳು. ರುಚಿರುಚಿಯಾದ ಅಡುಗೆ ಮಾಡೋದು, ಎಲ್ಲಾರ್ನು ಕರೆಯೋದು, ದೇವರ ಹೆಸರಲ್ಲಿ ನಾವೇ ಚೆನ್ನಾಗಿ ಇಳಿಸೋದು, ಒಬ್ರನ್ ಒಬ್ರು ಕಾಲ್ ಎಳಿಯೋದು, ಲೇವಡಿ ಮಾಡೋದು, ಯಾವ್ದೋ ಹಳೇ ನೆನಪನ್ನ ಎಳೆದ್ ತಂದು ಮುಂದೆ ಹಾಕ್ಕೊಂಡು ನಗೋದು - ಇದಕ್ಕೆಲ್ಲ ಒಂದು ಕಾರಣ ಬೇಕಲ್ಲ..ಅದಕ್ಕೆ ಈ ಹಬ್ಬಗಳು, ಪೂಜೆಗಳು, ಆರತಿಗಳು, ಜಯಂತಿಗಳು, ಉತ್ಸವಗಳು...

ಇಂಥ ಸಂದರ್ಭದಲ್ಲಿ ನಾವಿರುವಾಗ ಬೆಂಗಳೂರಿಗೆ ಗಣೇಶ ಉತ್ಸವ ಬಂದಿದೆ. ಬಹಳ ಜೋರಾಗಿ ನಡೀತಾ ಇದೆ ನಮ್ಮ ಬಸವನ್ಗುಡೀಲಿ.
ಸೇರಲು ಬೃಹದಾಕಾರದ ಅಂಗಳಗಳು
ರಂಜಿಸಲು ಮಹಾನ್ ಕಲಾವಿದರುಗಳು
ರುಚಿ ರುಚಿಯಾದ ತರಹೇವಾರಿ ತಿನಿಸುಗಳು
variety variety ಮುಖಗಳು
ಕಣ್ಣಲ್ಲೇ ಗುರ್ತು ಹಾಕ್ಕೊಬೇಕ್ ಅನ್ಸೋ ಫೇಸ್ ಕಟ್ ಗಳು
ಚಿಕ್ ಮಕ್ಳುಗಳು, ಅವ್ರ್ ಡಾನ್ಸ್ ಗಳು
ವಯಸ್ ಮಕ್ಳುಗಳು, ಅವ್ರ್ ತರಲೆಗಳು
ದೊಡ್ದೋರ್ಗಳು, ನಗೋಕೆ ಮರ್ತ್ಹೊಗಿರೋ ಮುಖಗಳು,
ಅವರ ಪಾಡುಗಳು, ಅವ್ರಿಗೆ ನಗೋರೆಲ್ಲ ವಿಸ್ಮಯಗಳು..

ಟೆಕ್ಕಿಗಳು, ಪಕ್ಕಿಗಳು, ಸಾಫ್ಟ್ವೇರ್ಗಳು, ಹಾರ್ಡ್ವೇರ್ಗಳು, mba ಗಳು
೩೦ ಆದ್ರೂ ಹೆಗಲಿಂದ ಕೆಳಗಿಳಿಯದ ಸ್ಕೂಲ್ ಬ್ಯಾಗ್ ಗಳು
ಜೀನ್ಸ್ ಪ್ಯಾಂಟ್ಗಳು, ಜೊತೆಗೆ ಮುಡೀಲಿ ಮಲ್ಲಿಗೆ ಹೂಗಳು
ಹಲ್ಗಿಂತ ದೊಡ್ಡ ದಾದ ಕ್ಲಿಪ್ಪುಗಳು
ಕಾಲ್ಗಿಂತ ಚಿಕ್ಕದಾದ ಚಪ್ಲಿಗಳು
ಕೂಪನ್ ಕೊಡೊ ಕ್ಯಾಶ್ ಕೌಂಟರ್ ಗಳು
ನೂಕು ನುಗ್ಲುಗಳು, ದೊಂಬಿಗಳು..
ಅಲ್ಲಿ ಪ್ರದರ್ಶಿಸಲ್ಪಡುವ ಆದಿ ಮಾನವನ ಸ್ವಭಾವಗಳು..

ಇಂಥ ಎಲ್ಲ extremities ನ ನಾವ್ಗಳು ಚಿಕ್ ವಯ್ಸ್ನಲ್ಲೇ ನೋಡ್ಕಂಡ್ ಬಿಡಬೇಕು. ದೊಡ್ದೊವ್ರ್ ಅದ್ಮೇಲ್ ಹ್ಯಾಗ್ಯಾಗ್ ಇರಬಾರದು, ಚಿಕ್ಕೊವ್ರ್ ಇದ್ದಾಗ್ ಏನೇನ್ ಮಾಡಿಲ್ಲ, ನಮ್ಮ ಸುತ್ತ ಮುತ್ತಲೂ  ಎಷ್ಟು ವಿಚಿತ್ರವಾದ ಮಾನವ ತಳಿಗಳು ಬದುಕುತ್ತಿವೆ - ಇವೆಲ್ಲದರ ಬಗ್ಗೆ ತಿಳ್ಕೊಳಕ್ಕೆ ಒಂದು ಒಳ್ಳೆ ಅವಕಾಶ..ಬನ್ನಿ ಬಸವನಗುಡಿಗೆ..

ನಾಳೆ ಸಂಜೆ ೭ ಗಂಟೆಗೆ APS ಕಾಲೇಜ್ ಮೈದಾನಕ್ಕೆ ಸೋನು ನಿಗಮ್ ಬರ್ತಿದಾನೆ..ಅವನ್ ಹಾಡ್ಕೊತಿರ್ತನೆ..ನಾವ್ ಮಸ್ತಿ ಮಾಡೋಣ..ಎಲ್ಲರೂ ಖಂಡಿತ ಬನ್ನಿ..

ರಾಜರತ್ನಮ್ ಹೇಳಿದ್ ಹಾಗೆ "ನಮ್ದೇ ಲೋಕ ಉಟ್ಟುಸ್ಕೋಬೆಕ್ ಈ ಲೋಕಾನೆ ಮರ್ತು"
ಖುಷಿಯಾಗಿರೋಕ್ ಇಲ್ಲ ತೆರಿಗೆ, ನಗು ಯಾವೋನ್ ಸ್ವತ್ತು...

    

Sunday, September 12, 2010

Lifu ishtene

ಬಾಡಿಗೆ ಜೀವನಕ್ ಒಗ್ ಹೋಗ್ಬಿಟ್ಟು
ಅಸಲಿ ಜೀವನ ಮರ್ತೆ ಬಿಟ್ವಿ
ಅಸಲಿ ಜನಕ್ ಬರ ಬಂತು
Lifu ishtene!

ಕಷ್ಟ ಪಟ್ಟು ದುಡಿಯೋಕ್ ರೋಗ
ಬಿಟ್ಟಿ ದುಡ್ದಂದರೆ ಎಲ್ಲಿಲ್ಲದ ಮೋಹ
ದೇವರೂ ನಮ್ಮನ್ ಕಾಪಡಲ್ಲ
Lifu ishtene!


ಜೀವನದ ಅರ್ಥ ಯಾರಿಗ್ ಬೇಕು
ದುಡ್ಡಿನ್ ಹಿಂದೆ ಹೊದೊವ್ರ್ ನಾವು
ಹೀಗೆ ಹೋದ್ರೆ ಏನಾಗ್ತಿವೋ 
Lifu ishtene!


ಗಿಮಿಕ್ ಮಾತಿಗ್ ಮರಳಾಗ್ತೀವಿ
ಸುಳ್ಳಿನ್ ನಗೂಗೆ ಮಾರ್ಹೊಗ್ತೀವಿ
ಯಾವಾಗ್ ಬುದ್ಧಿ ಕಲೀತಿವೋ
Lifu ishtene!

ವಾರಕ್ಕೊಮ್ಮೆ ಎಣ್ಣೆ ಸ್ನಾನ
ತಿಂಗಳಿಗೊಮ್ಮೆ ಕ್ರಾಪ್ ಕಟ್ಟು
ಹಬ್ಬಕ್ಕೊಂದು ಹೊಸ ಬಟ್ಟೆ
Lifu ishtene!

ದಿನಬೆಳಗಾದ್ರೆ ಗಡ್ಡ ಗೀಚ್ಕೋ
ಫಾರ್ಮಲ್ ಪ್ಯಾಂಟ್ಗೆ insert ಮಾಡ್ಕೋ
ಅಪ್ಪನ ಜೀವನ ನೀನು ಬದ್ಕೋ
Lifu ishtene!

ಬಾಯಿಗ್ ಬಂದಿದ್ ಪದಗಳ ಇಟ್ಟೆ
ಯದ್ವಾತದ್ವ ಬರ್ಕೊಂಡ್ ಬಿಟ್ಟೆ
ನಂದೂ ಬಾಡಿಗೆ ಕವನ ಅಷ್ಟೇ
Lifu ishtene!

ದಿನವು ಬೆಳಗ್ಗೆ jogging ಹೋಗ್ರಿ
gymmu diet ಯೋಗ ಮಾಡ್ರಿ
ತೂಕ ಮಾತ್ರ ಇಳಿಯೋದಿಲ್ಲ
Lifu ishtene!

ವಾರ್ವಾರ್ಗಟ್ಲೆ design ಮಾಡಿ
ತಿನ್ಗ್ಲಾನ್ಗಟ್ಲೆ coding ಮಾಡಿ
ಸಾವ್ರ ಸಾವ್ರ bugs ಹಾಕ್ತೀವಿ
Lifu ishtene!

ಅಪ್ಪ್ರೈಸಲ್ಲು promotionnu
ಚಿಲ್ರೆ ವಿಷಯಕ್ emotionnu
ನಾವ್ಯಾಕ್ ಹೀಗೋ ಗೊತ್ತಿಲ್ಲಪ್ಪ
Lifu ishtene!

ನಿನ್ನೆವರ್ಗು ಚೆನ್ನಾಗಿದ್ದೆ
ಇವತ್ಯಾಕೋ ಇಲ್ಲ ನಿದ್ದೆ
ಕವಿಯಾಗೋಣ ಅಂತ ಬರ್ದೆ
Lifu ishtene!

ಇಷ್ಟ ಆದ್ರೆ ತಡ್ಕೊಂಡ್ ಬಿಡ್ರಿ
ಇಲ್ಲ ಅಂದ್ರೆ ಬಯ್ಕೊಂಡ್ ಬಿಡ್ರಿ
ನಂಗು ಹಾಡ್ಗು ನಂಟೇ ಇಲ್ಲ
Lifu ishtene!

ಗಂಡ ಹೆಂಡತಿ ಮನೆ ಮಕ್ಳು
ಕೆಲಸ ಸಂಬಳ ಲೋನು ಕಾರು
ಜೀವನ ಬರೀ ತಿಕ್ಲು ತಿಕ್ಲು
Lifu ishtene!

ಸ್ವಂತ ಮನೇಲ್ ಇರಬೇಕಂತ
ಬೆಟ್ಟದಷ್ಟು ಸಾಲ ಮಾಡಿ
ಸಾಲ ಕಟ್ತ ಜೀವನ ಕಳ್ಕೋ
Lifu ishtene!

ಯಾರೋ ಬರದ ಅಂತ ನಾನು
ಸಿಕ್ಕಿದ್ ಪಕ್ಕಿದ್ ಪದಗಳ್ ತಂದು
ಸಿಕ್ಕಾಪಟ್ಟೆ ಹಾಳ್ ಮಾಡ್ ಬಿಟ್ಟೆ     
Lifu ishtene!