ಇವೆಲ್ಲ ನಾವುಗಳು ಒಟ್ಟಾಗಿ ಸೇರಿ ಖುಷಿಯಾಗಿರೋಕೆ ಅಂತ ಮಾಡಿಕೊಂಡ ನೆಪಗಳು. ರುಚಿರುಚಿಯಾದ ಅಡುಗೆ ಮಾಡೋದು, ಎಲ್ಲಾರ್ನು ಕರೆಯೋದು, ದೇವರ ಹೆಸರಲ್ಲಿ ನಾವೇ ಚೆನ್ನಾಗಿ ಇಳಿಸೋದು, ಒಬ್ರನ್ ಒಬ್ರು ಕಾಲ್ ಎಳಿಯೋದು, ಲೇವಡಿ ಮಾಡೋದು, ಯಾವ್ದೋ ಹಳೇ ನೆನಪನ್ನ ಎಳೆದ್ ತಂದು ಮುಂದೆ ಹಾಕ್ಕೊಂಡು ನಗೋದು - ಇದಕ್ಕೆಲ್ಲ ಒಂದು ಕಾರಣ ಬೇಕಲ್ಲ..ಅದಕ್ಕೆ ಈ ಹಬ್ಬಗಳು, ಪೂಜೆಗಳು, ಆರತಿಗಳು, ಜಯಂತಿಗಳು, ಉತ್ಸವಗಳು...
ಇಂಥ ಸಂದರ್ಭದಲ್ಲಿ ನಾವಿರುವಾಗ ಬೆಂಗಳೂರಿಗೆ ಗಣೇಶ ಉತ್ಸವ ಬಂದಿದೆ. ಬಹಳ ಜೋರಾಗಿ ನಡೀತಾ ಇದೆ ನಮ್ಮ ಬಸವನ್ಗುಡೀಲಿ.
ಸೇರಲು ಬೃಹದಾಕಾರದ ಅಂಗಳಗಳು
ರಂಜಿಸಲು ಮಹಾನ್ ಕಲಾವಿದರುಗಳು
ರುಚಿ ರುಚಿಯಾದ ತರಹೇವಾರಿ ತಿನಿಸುಗಳು
variety variety ಮುಖಗಳು
ಕಣ್ಣಲ್ಲೇ ಗುರ್ತು ಹಾಕ್ಕೊಬೇಕ್ ಅನ್ಸೋ ಫೇಸ್ ಕಟ್ ಗಳು
ಚಿಕ್ ಮಕ್ಳುಗಳು, ಅವ್ರ್ ಡಾನ್ಸ್ ಗಳು
ವಯಸ್ ಮಕ್ಳುಗಳು, ಅವ್ರ್ ತರಲೆಗಳು
ದೊಡ್ದೋರ್ಗಳು, ನಗೋಕೆ ಮರ್ತ್ಹೊಗಿರೋ ಮುಖಗಳು,
ಅವರ ಪಾಡುಗಳು, ಅವ್ರಿಗೆ ನಗೋರೆಲ್ಲ ವಿಸ್ಮಯಗಳು..
ಟೆಕ್ಕಿಗಳು, ಪಕ್ಕಿಗಳು, ಸಾಫ್ಟ್ವೇರ್ಗಳು, ಹಾರ್ಡ್ವೇರ್ಗಳು, mba ಗಳು
೩೦ ಆದ್ರೂ ಹೆಗಲಿಂದ ಕೆಳಗಿಳಿಯದ ಸ್ಕೂಲ್ ಬ್ಯಾಗ್ ಗಳು
ಜೀನ್ಸ್ ಪ್ಯಾಂಟ್ಗಳು, ಜೊತೆಗೆ ಮುಡೀಲಿ ಮಲ್ಲಿಗೆ ಹೂಗಳು
ಹಲ್ಗಿಂತ ದೊಡ್ಡ ದಾದ ಕ್ಲಿಪ್ಪುಗಳು
ಕಾಲ್ಗಿಂತ ಚಿಕ್ಕದಾದ ಚಪ್ಲಿಗಳು
ಕೂಪನ್ ಕೊಡೊ ಕ್ಯಾಶ್ ಕೌಂಟರ್ ಗಳು
ನೂಕು ನುಗ್ಲುಗಳು, ದೊಂಬಿಗಳು..
ಅಲ್ಲಿ ಪ್ರದರ್ಶಿಸಲ್ಪಡುವ ಆದಿ ಮಾನವನ ಸ್ವಭಾವಗಳು..
ಇಂಥ ಎಲ್ಲ extremities ನ ನಾವ್ಗಳು ಚಿಕ್ ವಯ್ಸ್ನಲ್ಲೇ ನೋಡ್ಕಂಡ್ ಬಿಡಬೇಕು. ದೊಡ್ದೊವ್ರ್ ಅದ್ಮೇಲ್ ಹ್ಯಾಗ್ಯಾಗ್ ಇರಬಾರದು, ಚಿಕ್ಕೊವ್ರ್ ಇದ್ದಾಗ್ ಏನೇನ್ ಮಾಡಿಲ್ಲ, ನಮ್ಮ ಸುತ್ತ ಮುತ್ತಲೂ ಎಷ್ಟು ವಿಚಿತ್ರವಾದ ಮಾನವ ತಳಿಗಳು ಬದುಕುತ್ತಿವೆ - ಇವೆಲ್ಲದರ ಬಗ್ಗೆ ತಿಳ್ಕೊಳಕ್ಕೆ ಒಂದು ಒಳ್ಳೆ ಅವಕಾಶ..ಬನ್ನಿ ಬಸವನಗುಡಿಗೆ..
ನಾಳೆ ಸಂಜೆ ೭ ಗಂಟೆಗೆ APS ಕಾಲೇಜ್ ಮೈದಾನಕ್ಕೆ ಸೋನು ನಿಗಮ್ ಬರ್ತಿದಾನೆ..ಅವನ್ ಹಾಡ್ಕೊತಿರ್ತನೆ..ನಾವ್ ಮಸ್ತಿ ಮಾಡೋಣ..ಎಲ್ಲರೂ ಖಂಡಿತ ಬನ್ನಿ..
ರಾಜರತ್ನಮ್ ಹೇಳಿದ್ ಹಾಗೆ "ನಮ್ದೇ ಲೋಕ ಉಟ್ಟುಸ್ಕೋಬೆಕ್ ಈ ಲೋಕಾನೆ ಮರ್ತು"
ಖುಷಿಯಾಗಿರೋಕ್ ಇಲ್ಲ ತೆರಿಗೆ, ನಗು ಯಾವೋನ್ ಸ್ವತ್ತು...