Sunday, February 7, 2010

ಶುರು

ಏನಾದ್ರು ಬರೀಬೇಕು ಅಂತ ತುಂಬ ದಿನದಿಂದ ಅನ್ನಿಸ್ತಾ ಇತ್ತು. ರವಿ ಬೆಳಗೆರೆ, ಜೋಗಿ,K.S.ನ, ರೋಬಿನ್ ಶರ್ಮ, ನೆಪೋಲೆಯನ್ ಹಿಲ್, ರಿಚರ್ಡ್ ಬಾಖ್, ಡೆಯ್ಲ್ ಕಾರ್ನೆಗಿ, ಪ್ರೊಫ್.ದೊಡ್ಡರಂಗೇ ಗೌಡ, BR ಲಕ್ಷ್ಮಣ ರಾವ್ , ಬಿಲ್ ಫಿಟ್ಜ್ ಪ್ಯಾಟ್ರಿಕ್ , ಮಿರ್ಜಾ ಘಾಲಿಬ್, kenneth blachard ಇವ್ರನೆಲ್ಲ ನನಗೆ ಅರ್ಥ ಅಗೊಷ್ಟರ ಮಟ್ಟಿಗೆ ಓದ್ಕೊಂಡೆ. ಈಗ ಏನಾದ್ರು ಒಂಚೂರ್ ಬರಿಯೋ ಪ್ರಯತ್ನ ಮಾಡ ಬಹುದು ಅಂತ ಧೈರ್ಯ ಬಂದಿದೆ. ಇನ್ಮೇಲೆ ರೆಗುಲರ್ ಆಗಿ ಬರಿಯೋ ಪ್ರಯತ್ನ ಮಾಡೋ ಹುಮ್ಮಸ್ಸಿನಲ್ಲಿ ಇದೀನಿ.
ನನಗೆ ಇಲ್ಲಿ ತನಕ ಇಂಟರೆಸ್ಟಿಂಗ್ ಅನ್ನಿಸಿರುವ ಪುಸ್ತಕಗಳ ಲಿಸ್ಟ್ ಮಾಡಿದಿನಿ. ಈ ಕೆಳಗಿನ ಎಲ್ಲ ಬುಕ್ಸು worth buying.
ರವಿ ಬೆಳಗೆರೆ:
ಖಾಸ್ ಬಾತ್ - rb ಯ ಜೀವನ ಅನುಭವ ತಿಳಿಸುವ collection of articles
ಲವ್ ಲವಿಕೆ - ಪ್ರತಿಯೊಬ್ಬ ಭಾವುಕನಿಗೂ,ರಸಿಕನಿಗೂ, ಭಗ್ನ ಪ್ರೇಮಿಗೂ ಇಷ್ಟವಾಗುವಂಥ ಪ್ರೇಮ ಗ್ರಂಥ
ಬಾಟಮ್ ಐಟಂ - ಜೀವನ ಮೌಲ್ಯಗಳ ಬಗ್ಗೆ rb ಯ ಅನಿಸಿಕೆಗಳು.
ಜೋಗಿ:
"ಜೋಗಿ ಮನೆ" ಮತ್ತು "ರವಿ ಕಾಣದ್ದು": ಇದೊಂಥರ ನವರಸಗಳೂ ಇರುವಂಥ ರಸಾಯನ. ಜೀವನವನ್ನು ಉತ್ಕಟವಾಗಿ ಪ್ರೀತಿಸುವ ಒಬ್ಬ ಮನುಷ್ಯ ಜೋಗಿ. ಜೋಗಿ ನಮ್ಮ ನಿಮ್ಮಂತೆಯೇ ಅಂತ ಕೆಲವು ಕಡೆ ಅನ್ನಿಸಿದರೆ ಇನ್ನು ಕೆಲವು ಕಡೆ, no jogi is way ahead of me ಅಂತ ಅನ್ನಿಸುತ್ತದೆ. collection of short essays ಇದು.
(ಬಾಕಿ ಇದೆ )





























Tuesday, February 10, 2009

Sರು

ಪ್ರೀತಿಸ್ವಾಗ ಏಸರ್ ನೋಡ್ಕಂಡ್
ಪ್ರೀತಿಸ್ಕೊಬೇಕ್ ಅನ್ಸುತ್ತೆ.
ಏಸರ್ ತುಂಬ ಸಿಂಪಲ್ ಆದ್ರೆ
ಭಾರಿ ಪಜೀತಿ ಆಗತ್ತೆ.

ಕನಸ್ ಕಣ್ಡೌಲು ಕಯ್ ಇಡ್ಲಂದ್ರೆ
ಸ್ವರ್ಗಕ್ ಮೂರೇ ಸ್ಟೆಪ್ ಅಂತೆ..
ಒಂದ್ವೇಳೆ ಅದ್ ಅಗ್ಲಿಲ್ಲಂದ್ರೆ
ಜೀವನ ಬರ್ಬಾದ್ ಆದಂಗೆ.

ಓದೋವ್ಲ್ ಓದ್ಲು ಇನ್ಯಾಕ್ ಚಿಂತೆ
ಅನ್ತ್ನೀನ್ ಅನ್ಕಂಡ್ ಹೊರಟ್ರೆ
ಕಪಿಯಂಗ್ ಆಡ್ತೈತ್ ನಿನ್ ಒಳ್ ಮನ್ಸು
ಅವಳ್ ಎಸ್ರ್ ಎಲ್ಲಾರ್ ಕಾಣ್ಸಿದ್ರೆ.

ಮನೆ ಮುಂದೆ, ಕಾರಿನ್ ಹಿಂದೆ,
ಅಂಗ್ಡಿ ಮ್ಯಾಲೆ, ಲಾರಿ ಕೆಳ್ಗೆ..
ಎಲ್ಲೆಂದ್ರಲ್ಲಿ ಅವ್ಳೆಸ್ರು
ಕಟ್ದಂಗ್ ಆಗ್ತದ್ ನಿಂಗ್ ಉಸ್ರು.

ಹಿಂಗವ್ಳೆಸ್ರು ಕಂಡಾಗೆಲ್ಲ
ಅಣೆ ಕಟ್ ಮುರ್ದಿದ್ ನದಿಯಂಗೆ
ನೆನ್ಪಿನ್ ಬುತ್ತೀನ್ ಬಿಚ್ಕಂಡ್ ಬಂದು
ಜಾಡ್ಸಿ ಎದೆಗೆ ಒದ್ದಂಗೆ.

ಕಾಡ್ತಾ ಇದ್ರೆ ನಿಂಗ್ ಅವಳ್ನೆನ್ಪು
ನಿಂಗಾಗ್ ಅನ್ಸೆ ಅನ್ಸುತ್ತೆ..
'ಪ್ರೀತ್ಸೋವಾಗ ಎಸ್ರ್ ನೋಡ್ಕಂಡ್
ಪ್ರೀತಿಸ್ಬೇಕಿತ್ ಅನ್ಸುತ್ತೆ '


Sunday, February 8, 2009

ಒಂದ್ ಸಮಸ್ಯೆ

ಅಮ್ಮ ಮನೆಯೊಳಗಿಲ್ಲ..ರಾಮ..ರಾಮ
ನಂದೇ ಅಡ್ಗೆ ನಂದೇ ತಿಂಡಿ..ನನಗಿಲ್ಲ ವಿರಾಮ.
ಅಪ್ಪಂಗೆ ಕೆಲಸವಂತೆ..ಬೆಳ್ಗೇನೆ ಪರಾರಿ.
ತಮ್ಮಿನ್ನು ಚಿಕ್ಕೊವ್ನ್ರಿ, ಮಲ್ಗೊವ್ನೆ ಸೋಮಾರಿ.

ಚಿಕ್ಲೋಟ್ದಲ್ ಕಾಪೀನ ಬೆರಸ್ ಬೇಕಂತೆ..
ಹಾಲೆಷ್ಟೋ, ಸೀ ಎಷ್ಟೋ, ನಂಗ್ ನಂದೇ ಅಳ್ತೆ..
ಕಾಪಿನ್ ಕುಡಿದ್ ಅಮ್ಮಂದ್ಲು 'ನೀನ್ ಬಲೆ ಬೆಪ್ಪು'
'ಕಾಪಿಗ್ ಬೇಕಾದ್ದು ಸೀ ಕಣೋ..ನೀ ಹಾಕಿದ್ ಉಪ್ಪು' !

ಹೀಗೆ ನನ್ ನಳಪಾಕ ಮುಂದಕ್ಕೂ ಸಾಗ್ತು..
ಹೇಳ್ತಾನೆ ಹೋದ್ರೆ ಹಾಳೆನೆ ಸಾಲ್ದು..
ಪ್ರತಿ ತಿಂಗಳು ಬರ್ತವೆ ಇಂಥ ಮೂರ್ದಿನ..
ಹುಡ್ಕ್ಬೇಕ್ರೀ ಸಮಸ್ಯೆಗೆ ಪರಿಹಾರ ಒಂದಿನ!

ಅಮ್ಮ ಮನೆಯೊಳಗಿಲ್ಲ ರಾಮ..ರಾಮ..
ಅಡ್ಗೆನು ನಂದೇ..ತಿನ್ಡಿನು ನಂದೇ..
ನಾನೇನ ಕಲಿಯುಗದ ಭೀಮ?

Wednesday, December 3, 2008

ಹಾಡು ಬರೆಯಬೇಕು

ಹಾಡು ಬರೆಯಬೇಕು
ನಾ ಹಾಡು ಬರೆಯಬೇಕು
ಚೆಂದದೊಂದು ಪುಟ್ಟದೊಂದು
ಹಾಡು ಬರೆಯಬೇಕು.

ಅದು,
ಹುಣ್ಣಿಮೆ ಬೆಳದಿಂಗಳಂತೆ ತಂಪಾಗಿರಬೇಕು,
ಮಗುವಿನ ನಗುವಿನಂತೆ ಮುಗ್ಧವಾಗಿರಬೇಕು.
ಕಾಡಿನ ಕತ್ತಲಂತೆ ಕಾಡುವಂತಿರಬೇಕು ,
ನಾಡಿನ ಜಂಜಾಟಗಳ ಮರೆಯುವಂತಿರಬೇಕು.
ಪುಟ್ಟದೊಂದು ಚೆಂದದೊಂದು
ಹಾಡು ಬರೆಯಬೇಕು,
ನಾ ಹಾಡು ಬರೆಯಬೇಕು.

ನನ್ನ ಅವಳ ಪ್ರಣಯದಂತೆ,
ಮಧುರ ಪ್ರೇಮ ಕಾವ್ಯದಂತೆ,
ಮನದ ದುಗುಡ ಮರೆಯುವಂತೆ,
ಚೈತನ್ಯದ ಬುಗ್ಗೆಯಂತೆ,
ನನ್ನ ಹಾಡು ಹುಟ್ಟಿತು...
ಮನಸು ಹಗುರವಾಯಿತು...

Sunday, October 12, 2008

ಹೀಗೊಂದು ಕವಿತೆ

ಮೋಡವು ಮಳೆಯನು ಚೆಲ್ಲಿರಲು,
ಭೂಮಿಯು ಅದರಲಿ ಮಿಂದಿರಲು,
ನಲ್ಲನು ನಲ್ಲೆಗೆ ಕಾದಿರಲು,
ಬರುವಳಾ ಸುಂದರಿ ಜೊತೆಗಿರಲು?

ಕೇಳಲು ಕೌತುಕ ನಿಮಗಿರಲು..
ನನ್ನೀ ಕವಿತೆ ಬಣ್ಣಿಸಲು..

ಮಿಲನ ಮಹೋತ್ಸವ ಸಂಭ್ರಮ ಅಲ್ಲಿ,
ವಿರಹ ವೇದನೆಯ ತಳಮಳ ಇಲ್ಲಿ,
ಬರುವಳಾ ನಲ್ಲನ ಮಾತಿನಮಲ್ಲಿ?
ಕೆನ್ನೆಯ ತುಂಬ ನಗೆಯನು ಚೆಲ್ಲಿ?

ಕೇಳಲು ಕೌತುಕ ನಿಮಗಿರಲು..
ನನ್ನೀ ಕವಿತೆ ಬಣ್ಣಿಸಲು..

ಸಂಜೆಯು ಕರಗಿ ಬಂದನು ಚಂದ್ರ,
ಪ್ರೇಮಿಯ ಸುಳಿವೇ ಇಲ್ಲದ ಮಿತ್ರ.
ನಲ್ಲೆಯು ಮಾತನು ತಪ್ಪಿದಳು,
ನಲ್ಲನ ಮನವ ಚಿವುಟಿದಳು.

ಇನ್ನು, ಕೇಳಲು ಕೌತುಕ ನಿಮಗಿರದು,
ಬರೆಯುವ ತವಕ ನನಗಿರದು.
ನಲ್ಲೆಗೆ ಹೇಳಿ ಧಿಕ್ಕಾರ,
ಮುಗಿಸುವೆ ಕವಿತೆ, ನಮಸ್ಕಾರ!

Monday, October 6, 2008

Dream girl

ನೀನೋ ಬಲು ಬೆಳ್ಳಗೆ !
ಜೊತೆಗೆ ಮುಡಿದ ಮಲ್ಲಿಗೆ !!

ನಿನ್ನ ನೋಡಿ ಚಂದ್ರಮ,
ಪಟ್ಟನಂತೆ ಸಂಭ್ರಮ !!

ನೀನಲ್ಲವೇ ನನ್ನ ನೀರೆ !
ಮಧುರ ಪ್ರೇಮ ಕಾವ್ಯಧಾರೆ !!
ನೀನು ಬೇಡ ಎನ್ನದಿರೆ,
ನಾನಲ್ಲವೇ ನಿನ್ನ ದೊರೆ !!

Saturday, October 4, 2008

A Bird

ಬಾನಲಿ ಹಾರುತಿತ್ತು ಒಂದು ಹಕ್ಕಿ
ಮೆಲ್ಲಗೆ ಹಾಡುತ್ತಿತ್ತು ಭಾವ ಉಕ್ಕಿ !!
ಗೆಳೆಯನ ನೆನೆದಂತಿತ್ತು ಪುಟ್ಟ ಹಕ್ಕಿ
ಬೇಸರದಿ ಅಳುತಲಿತ್ತು ಬಿಕ್ಕಿ ಬಿಕ್ಕಿ !!

ಏನೆಂದು ಕೇಳಲು ಹೋಗಿ ನಾನು,
ಮೌನವ ತಾಳಿತು ರಾಣಿ ಜೇನು.
ಮೌನದಿ ಅರ್ಥವ ಕಂಡೆ ನಾನು,
ದೂರವಾಗಿ ಹೋದನಂತೆ ಅವಳ ವೇಣು.

"ನನ್ನದು ನಿನ್ನಂತೆಯೇ ದುರಂತ ಕಥೆ
ಪ್ರೇಮಿಯು ಇದ್ದರೂ ಇಲ್ಲದಂತೆ !!
ಭಗ್ನಪ್ರೇಮ ಕಥೆಗಳಿವು ಎಷ್ಟೋ ಅಂತೆ
ಧೈರ್ಯ ಮಾಡಿ ನಡೆಮುಂದೆ" ಎಂದು ಹೇಳಿಬಂದೆ.

ಬಾನಲಿ ಹಾರುತಿತ್ತು ಒಂದು ಹಕ್ಕಿ
ಮೆಲ್ಲಗೆ ಹಾಡುತಿತ್ತು ಭಾವ ಉಕ್ಕಿ.