Thursday, June 9, 2011

ರೋಗ

ಗಾಳಿ ನೀರು ಸೂರ್ಯ ಚಂದ್ರ
ಯಾವಾಗಾದ್ರೂ ಕೊಚ್ಕೊಂಡಿದ್ರ
ಮನ್ಶಂಗ್ ಮಾತ್ರ ಯಾಕೀ ರೋಗ
ಹಾಕ್ಕೊಬಾರ್ದ ಬಾಯಿಗ್ ಬೀಗ!!

Saturday, April 30, 2011

ದರ್ದು

ಅನ್ಕೊಂಡಿದ್ದು ಅನ್ಕೊಂಡಾಗ್ಲೇ ಆಗ್ಬೇಕ್ ಅನ್ನೋ ದರ್ದು
ಇರೋದೇನೋ ಸರಿ ಆದ್ರೆ ಜೀವನ ಹಂಗೆ ಇರ್ದು
ಕಾಯೋದ್ ಬಿಟ್ಟು ಕೆಲ್ಸ ಮಾಡ್ಬೇಕ್ ತಲೆ ಕೆಡ್ಸ್ಕೋ  ಬಾರ್ದು
ಕೊಡ್ಬೇಕದಾಗ್  ಅವ್ನೆ ಕೊಡ್ತಾನ್ ಬೇಡ ಅಂದ್ರು ಕರ್ದು

Wednesday, April 27, 2011

ನೀರಿನ್ ಮೇಲಿನ್ ಗುಳ್ಳೆ

ನೀರಿನ್ ಮೇಲಿನ್ ಗುಳ್ಳೆ ಥರ ಖುಷಿ ಅನ್ನೋದ್ ತಿಳ್ಕೋ
ಆಗಿಂದಾಗ್ಗೆ ಸತ್ ಹೋಗತ್ತೆ ಮತ್ತೆ ಅದನ್ ಪಡ್ಕೋ
ನಾನ್ ಹೇಳಿದ್ ಸರಿ ಅನ್ನಿಸ್ತಿದ್ರೆ ತಲೇಗ್ ಹುಳ ಬಿಟ್ಕೋ
funda ಜಾಸ್ತಿ ಅಂತನ್ಸಿದ್ರೆ ಬೆಚ್ಚಗ್ ಹೊದ್ ಕೊಂಡ್ ಮಲ್ಕೋ

Sunday, April 24, 2011

ಹಾಳಾದ ಸಂಜೆ

ಹಾಳಾದ ಸಂಜೆ, ಕೂತಿರಲು ನಾನು 
ನೆನಪೊಂದು ತೇಲಿ ಬಂತು 
ಮೃತವಾದ ಕನಸು ಮತ್ತೊಮ್ಮೆ ಚಿಗುರಿ 
ಹೊಸ ಆಸೆ ನನ್ನಲಿಂದು

ನೂರೊಂದನೆ ಬಾರಿಗೆ ಹೀಗಾಗಿದೆ
ಆ ನೂರೂ ಸಲಗಳೂ ಸೋತಾಗಿದೆ 

ಭರವಸೆಯೇ ಇಲ್ಲದೆ ದಾರಿ ಕಾಯುವೆ
ಯಾಕೆ ಇಂಥ ಪಾಡು?
ಇಂದಾದರೂನು ಈ ನನ್ನ ಕನಸು
ನನಸಾಗುವಂತೆ ಮಾಡು    

Sunday, November 7, 2010

ಏನಪ್ಪಾ..ಗೊತ್ತಾಗತ್ತ...ಒಂಥರಾ...ಅಷ್ಟಷ್ಟಷ್ಟೇ!!

ಸಮಯ ಬೆಳಗ್ಗೆ 8.45.ಪಾರ್ಕಿಂಗ್ ಲಾಟ್ ಅಲ್ ಸೈಕಲ್ ನಿಲ್ಸಿ, ಕ್ಲಾಸ್ ನಡಿತಿರೋದು ರೂಂ ನಂ 212 ಅಲ್ಲೋ ಅಥವಾ 312 ಅಲ್ಲೋ ಅನ್ನೋ confusion ಅಲ್ಲೇ 212 ರ ಮುಂದೆ ಬಂದು ನಿಂತೆ. ಕ್ಲಾಸ್ ಶುರುವಾಗಿ 15 ನಿಮಿಷ ಆಗಿತ್ತು. "May i come in sir" ಅಂದೆ. "ಬಾಪ್ಪ, tuition ಈಗ ಮುಗೀತಾ? ಸ್ವಲ್ಪ ಸುಧಾರಿಸಿಕೊಂಡು ಎರಡ್ ನಿಮಿಷ ಆದ್ಮೇಲ್ ಬರಕೋ " ಅಂದ್ರು ಮೇಷ್ಟ್ರು. "how nice of him?" ಅನ್ನಿಸ್ತು. ಮಾರನೆ ದಿನವೂ ಅದೇ ಸನ್ನಿವೇಶ. ಆದರೆ dialogue ಮಾತ್ರ ಬೇರೆ. "May i come in sir" ಅಂದೆ. "ಏನಪ್ಪಾ..ನೀನು ಇಷ್ಟ್ ಲೇಟ್ ಆಗಿ ಬರೋದಾದ್ರೆ ಕ್ಲಾಸ್ ಗೆ ಬರಲೇ ಬೇಡ..tuition ಅಲ್ ಎಲ್ಲ ಕಲ್ತ್ಕೊತಿನಿ, ಕಾಲೇಜ್ ಗೆ ಬರೋದ್ ಕಾಟಾಚಾರಕ್ಕೆ ಅನ್ನೋ ಅಹಂಕಾರ ನಿಂಗೆ..ಗೊತ್ತಾಗತ್ತ..ಬಾ ಒಳಗೆ"..GSS ಸರ್ ಇದ್ದಿದ್ದೆ ಹಾಗೆ..ಅವ್ರು ಯಾವಾಗ ಹ್ಯಾಗಿರ್ತಾರೆ, ಯಾವಾಗ ಹ್ಯಾಗ್ react ಮಾಡ್ತಾರೆ ಅನ್ನೋದು ಊಹಿಸೋಕೆ ಆಗ್ತಿರ್ಲಿಲ್ಲ.

ಹದಿನೇಳು, ಹದಿನೆಂಟು ವಯಸ್ಸಿನ 110 ಮಂಗಗಳನ್ನು 25x40 ಜಾಗದಲ್ಲಿ ಕೂಡು ಹಾಕಿ, ಅವೆಲ್ಲ ಸದ್ದೇ ಮಾಡದೆ ಸತ್ತ ಹೆಣಗಳ ತರಹ ಸುಮ್ಮನೆ ಇರಬೇಕು ಅಂತ ಬಯಸುತ್ತ ಇದ್ದಿದ್ದು utter foolishness. ಜೀವನೋತ್ಸಾಹ ತುಂಬಿ ತುಳುಕೋ ವಯಸ್ಸು ಅದು. ಕ್ಲಾಸು ಸದಾ ಗಿಜುಗುಡುತಿತ್ತು. ಇದು ಅರ್ಥವಾಗಿದಿಯೇನೋ ಎಂಬಂತೆ GSS ತಮ್ಮ ಪಾಡಿಗೆ ತಾವು ಬಂದು ಬೋರ್ಡಿನ ಮೇಲೆ ಲೆಕ್ಕಗಳನ್ನ ಬರೆಯುತಿದ್ದರು. ನಾವುಗಳು ಕೊನೆಗೆ ತೆಪ್ಪಗಾಗಿ ಬರೆದು ಕೊಳ್ಳಲು ಆರಂಭಿಸುತಿದ್ದೆವು. ಆದರೆ ಒಂದಿನ ಏನಾಯ್ತೋ ಏನೋ ಗೊತ್ತಿಲ್ಲ. ಎಂದಿನಂತೆ ಗಿಜುಗುಡುತಿದ್ದ ಕ್ಲಾಸಿನೊಳಗೆ ಬಂದ GSS, "ಯಾಕ್ ಹಾಗೆ ಬಡ್ಕೋತಿದೀರ..ಯಾಕೆ ನಿಮ್ಮನೇಲಿ ಯಾರದ್ರು ಸತ್ ಹೋಗಿ ಬಿಟ್ಟಿದ್ದಾರ?" ಅಂದು ಬಿಡುವುದೇ? GSS ಇದ್ದಿದ್ದೆ ಹಾಗೆ.

GSS ಗೆ distractions ಅಂದ್ರೆ ಆಗ್ತಿರ್ಲಿಲ್ಲ. ಒಂದಿನ ಸಂದೀಪ ಕಿಟಕಿಯ ಆಚೆ ನೋಡ್ತಾ ಇದ್ದ. ಅದನ್ನು GSS ನೋಡಿ "ಏನಪ್ಪಾ, ಆ ಮರದಲ್ಲಿ ಎಷ್ಟು ಎಲೆ ಇದೆ ಅಂತ ಲೆಕ್ಕ ಹಾಕ್ತ ಇದ್ದೀಯ? ಹೋಗು..ಆ ಮರದ ಮೇಲೆ ಕೂತ್ಕೊಂಡು ಲೆಕ್ಕ ಹಾಕು..ನೀನು ಅದಕ್ಕೆ ಲಾಯಕ್ಕು..ಗೊತ್ತಾಗತ್ತ?"..ಅಂತ ಗುಡುಗಿದ್ದರು. ಕ್ಲಾಸಲ್ಲಿ ಕಾಲು ಕುಣಿಸುತಿದ್ದ ಒಬ್ಬನಿಗೆ "ಏನಪ್ಪಾ..ನಿಮ್ಮಪ್ಪ tailorra? ಹಾಗೆ ಕಾಲು ಕುಣಿಸ್ತಿಯಲ್ಲ..ಹೋಗು, ನೀನು ಅಂಗಿ ಚಡ್ಡಿ ಹೊಲ್ಕೊಂಡು ಕೂತ್ಕೋ..ಗೊತ್ತಾಗತ್ತ" ಅಂದಿದ್ದರು.

GSS ಗೆ CET ಬಲು ಮೆಚ್ಚುಗೆಯ ಟಾಪಿಕ್.."ಏನಪ್ಪಾ.CET ಇದಿಯಲ್ಲ..ಅದು ಒಂಥರಾ ಒನ್ ಡೇ ಮ್ಯಾಚ್ ಇದ್ ಹಾಗೆ..ಎಲ್ ಬೇಕಾದರು ನಿಂತ್ಕೊಂಡು batting ಮಾಡಬಹುದು..ವಿಕೆಟ್ ಹಿಂದೆ ಬೇಕಾದ್ರೂ ನಿಂತ್ಕೊಂಡ್ ಬಿಡಬಹುದು..ಬೇಗ runs score ಮಾಡ್ಬೇಕ್ ಅಷ್ಟೇ..ಆದ್ರೆ PUC ಇದಿಯಲ್ಲ, ಅದು ಒಂಥರಾ ಟೆಸ್ಟ್ ಮ್ಯಾಚ್ ಥರ..ನಿಧಾನಕ್ ಆಡಬೇಕು..ಏನಪ್ಪಾ..ಗೊತ್ತಾಗತ್ತ...ಒಂಥರಾ...ಅಷ್ಟಷ್ಟಷ್ಟೇ"     

PUC ಕಷ್ಟ, CET ಅದಕ್ಕಿಂತ ಕಷ್ಟ ಅನ್ನೋಕೆ GSS ಕೊಡ್ತಾ ಇದ್ದ ಕೆಲವು examples. "99,99,100..ಅಯ್ಯೋ ಹೇಳೋಕೇ ಸುಸ್ತಾಗತ್ತೆ..ಇನ್ನ ಅಷ್ಟ್ ಮಾರ್ಕ್ಸ್ ತೆಗಿಯೋದು ಎಷ್ಟ್ ಕಷ್ಟ ಇರಬೇಡ..ಏನಪ್ಪಾ..ಗೊತ್ತಾಗತ್ತ?..ಒಂಥರಾ ತುಂಬಾ ಕಷ್ಟ ಇದೆ..ಆಮೇಲೆ PUC ಲಿ ಮಾರ್ಕ್ಸ್ ಬಂದ್ರೆ CET ಲಿ ಬರತ್ತೆ ಅಂತೇನಿಲ್ಲ..CET , PUC ಎರಡು ಒಂಥರಾ ತುಂಬಾ different ಇದೆ..PUC ಲಿ ಒಳ್ಳೆ ಮಾರ್ಕ್ಸ್ ಬಂದರೂ CET rank ಒಂದೊಂದ್ ಸಲ ಎಲ್ಲೋ ಹೊರಟ್ ಹೋಗತ್ತೆ...ರಂಜನಿ ಗೊತ್ತ ರಂಜನಿ..PUC ಲಿ 99,99,100..ಆಮೇಲೆ CET ಎಷ್ಟ್ ಗೊತ್ತ? 302 ..ಅಲ್ಲ ಒಂಥರಾ ಫುಲ್ down ಆಗ್ ಹೋಯ್ತಲ್ಲ..ಏನಪ್ಪಾ..ಗೊತ್ತಾಗತ್ತ..ಏನಮ್ಮ..ಗೊತ್ತಾಗತ್ತ.."

"ಕೆಲವರಿದಂತು CET rank ಯಾವ ಥರ ಇರತ್ತೆ ಗೊತ್ತ..Software engineer salary ಥರ..ಎಷ್ಟಪ್ಪ ನಿನ್ ranku ಅಂದ್ರೆ..25000 ,30000.. ಹೀಗ್ ಹೇಳ್ತಾರೆ...ಅದಕ್ಕೆ CET ಒಂಥರಾ ತುಂಬಾ ಕಷ್ಟ ಇದೆ..ಏನಪ್ಪಾ..ಗೊತ್ತಾಗತ್ತ...ಒಂಥರಾ...ಅಷ್ಟಷ್ಟಷ್ಟೇ ". GSS ಇದ್ದಿದ್ದೆ ಹಾಗೆ.

ಈಗಲೂ NCJ, PCM * ಬಾಯ್ಸ್ (ಬಾಯ್ಸ್ ಅಷ್ಟೇ contact ಅಲ್ ಇರೋದು)  ಎಲ್ಲೇ ಸಿಕ್ರೂ, GSS ಬಗ್ಗೆ ಮಾತಾಡದೆ ಮಾತು ಮುಗಿಯೋದೇ ಇಲ್ಲ..ಅಷ್ಟರ ಮಟ್ಟಿಗೆ ನಮಗೆ ನೆನಪುಗಳನ್ನ ಕಟ್ಟಿ ಕೊಟ್ಟ GSS sir ಗೆ ಥ್ಯಾಂಕ್ಸ್. Thank you Sir... 
 

Monday, November 1, 2010

ಟ್ರೆಕ್ಕಿಂಗು ಬೇಕ ಗುರು?

ಬೆಟ್ಟ ಗಿಟ್ಟ ಹತ್ತುವಂಥ ಹುಮ್ಮಸ್ಸಲ್ಲಿ
ವಿ.ಪಿ.ಯನ್ನು ಕರೆದೆ ನಾನು ಆಫೀಸಲ್ಲಿ
ಅವನಲ್ಲೊಂದು ಪ್ರಶ್ನೆ ಇತ್ತು ಮನಸ್ಸಲ್ಲಿ
ಟ್ರೆಕ್ಕಿಂಗು ಬೇಕ ಗುರು?

ಇಂಥದ್ದೊಂದು ಪ್ರಶ್ನೆಯನ್ನು ಇಟ್ಟುಕೊಂಡು
ಕೆಂಪು ಬಸ್ಸಲ್ ನಾವುಗಳು ಕೂತುಕೊಂಡು
ಕಾಣದ ಊರಿಗೆ ಹೋಗೇ ಬಿಟ್ವಿ  ಕೇಳಿಕೊಂಡು-
ಟ್ರೆಕ್ಕಿಂಗು ಬೇಕ ಗುರು?

 ನಾನು ವಿ.ಪಿ. ತುಂಬಾ ಫಿಟ್ಟು ಅನ್ಕೊಂಡಿದ್ದು
ಎಂಥ ಬೆಟ್ಟ ಕೂಡ ನಮಗೆ ಸುಲಭದ ತುತ್ತು
ಸ್ವಲ್ಪ ದೂರ ಹೋಗ್ತಿದ್ ಹಾಗೆ ಗೊತ್ಹಾಗ್ ಹೋಯ್ತು
ಟ್ರೆಕ್ಕಿಂಗು ಬೇಕ ಗುರು? 

ಅಂತೂ ಇಂತು ಬೆಟ್ಟದ ತುದಿಗೆ ಹೋಗಿ ಕೂತು
ತಂದಿದ್ ತಿಂಡಿeನ್ ಬಿಚ್ಚೋ ಹೊತ್ತಿಗ್ ಮಳೆ ಬಂತು
ಗಟ್ಟಿ ಚಟ್ನಿ ನೀರಾದಾಗ ಅನ್ನಿಸ್ತಿತ್ತು
ಟ್ರೆಕ್ಕಿಂಗು ಬೇಕ ಗುರು? 

ಹಾಕಿದ ಬಟ್ಟೆ ಎಲ್ಲ ಮಣ್ಣು, ಒದ್ದೆ, ಮುದ್ದೆ
ಇಳಿಯೋವಾಗ ಮೂರ್ನಾಕ್ ಸರಿ ಜಾರಿ ಬಿದ್ದೆ
ವಿ.ಪಿ. ಕಾಲು ಹಿಡ್ಕೊಂಡು ಬಿಡ್ತು ದಾರಿ ಮಧ್ಯೆ
ಟ್ರೆಕ್ಕಿಂಗು ಬೇಕ ಗುರು? 

ರಕ್ತ ದಾನ ಮಾಡಿಸ್ಬಿಟ್ವು ಜಿಗಣೆಗಳು
ದಾರಿ ಪೂರ ಕ್ರಿಮಿ, ಕೀಟ, ಹಾವುಗಳು
ಕೋರಸ್ ನಲ್ಲಿ ನಮ್ಮ ಇಂಥ ಹಾಡುಗಳು
ಟ್ರೆಕ್ಕಿಂಗು ಬೇಕ ಗುರು?
ಬೇಕ ಗುರು?ಬೇಕ ಗುರು?

Thursday, September 23, 2010

ಓದ್ಕೋ

ಇನ್ನು ಎಷ್ಟು ದಿನ ಅಂತ ನಾನ್ ಮಾಡಿದ ಚಟ್ನೀನೆ ತಿಂತ ಇರ್ತೀರಾ..ಸಾಕು ಬಿಡಿ..ನಂಗೂ ವಯಸ್ಸಾಯಿತು. ಇಷ್ಟು ಜೋರಾಗಿ ಓಡೋಕೆ ನನ್ ಕಯ್ಯಲ್ಲಿ ಆಗೋಲ್ಲ ಎಂದನ್ತಿತ್ತು ಅಡುಗೆ ಮನೆಯಲ್ಲಿ ಮಿಕ್ಸಿ..ಜೋರು ಶಬ್ದ ಅದರಿಂದ..ಎಲ್ಲೋ ಮಾರವಾಡಿ ಅಂಗಡೀಲಿ ಧೂಳು ತಿನ್ತ ಆರಾಮಾಗಿ ಜೀವನ ಸಾಗಿಸ್ತ ಇದ್ದೆ..ಅಲ್ಲಿಂದ ತಂದು ನಿಮ್ಮನೆ ಗೋಡೆಗೆ ನೇತು ಹಾಕಿ ಈ ಪಾಟಿ ಕೆಲಸ ಮಾಡಿಸ್ತ ಇದಿಯಲ್ಲ, ನ್ಯಾಯನ ಇದು..ಅನ್ದಂತಿತ್ತು ನನ್ ರೂಮಿನ ಫ್ಯಾನು..ಜೋರು ಶಬ್ದ ಅದರಿಂದ..

ದಿನವು ಇಂತಹ ನೂರಾರು ಪ್ರಶ್ನೆಗಳನ್ನು ಸ್ವೀಕರಿಸುತ್ತಿದ್ದ ಮನಸ್ಸು ಇಂದೇಕೋ ಮುಷ್ಕರ ಹೂಡಿ ಬಿಟ್ಟಿದೆ. ಯಾವುದೇ ಪ್ರಶ್ನೆಗಳನ್ನು, ಕರೆಗಳನ್ನು ರಿಸೀವ್ ಮಾಡುತ್ತಿಲ್ಲ..ನಾಟ್ reachable ..ಇವತ್ತು ಮನಸ್ಸು ಖಾಲಿ ಖಾಲಿ..ಹೇಳಬೇಕಾದ ಅನಿಸಿಕೆಗಳು ಎಷ್ಟೊಂದಿವೆ..ಆದರೆ ಮನಸಿನ ಮುಷ್ಕರದ ಕಾರಣ, ಅವುಗಳಲ್ಲಿ ಎಷ್ಟು,  ಪದಗಳಾಗಿ ಹುಟ್ಟುತ್ತವೋ ನೋಡಬೇಕಿದೆ. ಬರೆಯುವ ವಿಫಲ ಯತ್ನ ಮಾಡಬೇಕಿದೆ.

ಇವ್ರು ನಮ್ ಟೈಪು ಅಂತ ಅನ್ನಿಸೋಕೆ ಒಂದೆರೆಡು ಕಾರಣ ಸಿಕ್ಕರೆ ಸಾಕು, ಗೆಳೆತನ ತಾನೇ ತಾನಾಗಿ ಬೆಳಿಯೋಕೆ ಶುರುವಾಗತ್ತೆ. ನಿನ್ನ ಮೊದಲು ನೋಡಿದಾಗ ಅನ್ನಿಸ್ಸಿದ್ದು ಇದೇ..ಇವ್ರು ನಮ್ ಟೈಪು..ಗುರು ಪತ್ನಿ ಅನ್ನೋ ಪಾಯಿಂಟ್ ಬೇರೆ..ನಮ್ಮೊವ್ರು ಅನ್ನಿಸೋಕೆ.ಅಲ್ಲಿಂದ ಸಲೀಸಾಗಿ ಶುರು ಆಯಿತು ಗೆಳೆತನ..

ಅವತ್ತಿಂದ ಇವತ್ತಿನ ತನಕ ಎಷ್ಟೆಲ್ಲಾ ಮಾತಾಡಿದೀವಿ..
Multitasking, IISC, thesis, defence, aacld, ac3, ನಿನ್ ಮಗಳು, ಅವಳ ಸ್ಕೂಲು, ಅಲ್ಲಿ ನಡೀತಿದ್ದ orange day, pink day, teacher's day, ನಿಮ್ಮನ್ಲೇನ್ ತಿಂಡಿ ನಮ್ಮನ್ಲೇನ್ ತಿಂಡಿ, ಯಾಕೋ ಬೋರು, ಸವಾರಿ ಸಿನ್ಮ..ಸಿಗದ ಟಿಕೇಟು, ಶ್ರಷ್ಟಿ, ಮಂಗಳ ಗೌರಿ, ಮರದ ಬಾಗಿನ, ಬಾಳೆ ಗೊನೆ, ಟೈಮೇ ಸಾಕಾಗಲ್ಲ..ನಿಂಗೆ?, ಸ್ವಂತ ಮನೇನಾ ಬಾಡಿಗೆ ಮನೇನಾ, ಇಂಡಿಯಾನ ಫಾರಿನ್ನ, ನಂಗ್ porting ಇಷ್ಟ ಇಲ್ಲ, ಹೊಸ್ದೆನಾದ್ರು ಮಾಡ್ಬೇಕು, ಏನಾರ ಕಿತ್ ಹಾಕ್ಬೇಕು, AES ಪಪೆರ್ರು, ADL aarticallu , ಕೇರೆ ಮಾಡ್ದ ಜನ, ಅವರ ಅಹಂ, ನನ್ನ ಕಿತ್ ಹೋದ ಜೋಕು ಗಳು, ಯಾಕೋ ದೊಡ್ದೊವ್ರ್ ಹೀಗೆ?, ನಮ್ ಲೈಫು ನಂದು ಬಿಟ್ಬಿಡ್ರಪ್ಪ, ಇಲ್ಲಿ ಜನ ತುಂಬ ಸ್ವಾರ್ಥಿಗಳು, PRPD, processu, compliance, TNS, AAC delay,MPEG surroundu, presentationnu - ಅಲ್ಲಿ ಪ್ರದರ್ಶನ ಗೊಂಡ ಜನರ ಹಮ್ಮು ಬಿಮ್ಮುಗಳು, ಅದರಿಂದ ನಿನಗಾದ ಬೇಜಾರು, ನಾನು..ನನ್ ಗೋಳು, ಅದನ್ ಪ್ರಶಾಂತವಾಗಿ ಕೇಳಿಸಿಕೊಂಡ ನಿನ್ನ ಕಿವಿಗಳು, ಕೊನೆಗೂ ಸಿಕ್ತು ಸಿನ್ಮ ಟಿಕೇಟು..ಬೊಂಬಾಟ್ ಪಂಚರಂಗಿ, ಪಂಚರಂಗಿ ಹ್ಯಾಂಗೊವರ್ಗಳು, juice junction ನ್ನು, ಟೈಮ್ ಪಾಸು, ಕೊನಾರ್ಕ್ ದೋಸೆ, ಬೈಟು ಕಾಪಿ, ನಿಮ್ಮನೆಗೆ ಊಟಕ್ ಯಾವಾಗ್ ಕರೀತಿಯ..ಅಯ್ಯೋ ನಮ್ಮನೇಲಿ ಯಾರಗೂ ಹುಶಾರೆ ಇಲ್ಲ..ಕರೀತಿನ್ ಇರಪ್ಪ..

ಇಷ್ಟೇ ಬರಿಯೋಕ್ ಆಗಿದ್ದು..ನಾಳೆಯಿಂದ ನೀನು ಬರೋಲ್ಲ..Sure ah????